ಅಮೃತಸರ: ಸ್ಫೋಟಕ್ಕೆ ಕನಿಷ್ಠ ಮೂವರು ಬಲಿ, 10 ಜನರಿಗೆ ಗಾಯ
ಅಮೃತಸರ, ನ.18: ಪಂಜಾಬ್ನ ಅಮೃತಸರದ ರಾಜಾಸಾಂಸಿ ಗ್ರಾಮದ ನಿರಂಕಾರಿ ಭವನದ ಬಳಿ ರವಿವಾರ ಸಂಭವಿಸಿದ ಸ್ಫೋಟಕ್ಕೆ ಕನಿಷ್ಠ ಮೂವರು ಬಲಿಯಾಗಿದ್ದರೆ, ಇತರ 10 ಮಂದಿಗೆ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ನಿರಂಕಾರಿ ಭವನದ ಬಳಿ ಸ್ಪೋಟಕ ವಸ್ತುವನ್ನು ಎಸೆದು ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಘಟನೆಯಲ್ಲಿ 10 ಮಂದಿಗೆ ಗಾಯವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸುರಿಂದರ್ ಪಾಲ್ ಸಿಂಗ್ ಪಾರ್ಮರ್ ಹೇಳಿದ್ದಾರೆ.
Next Story