ಜೆಟ್ ಏರ್ವೇಸ್ನ ಸ್ವತಂತ್ರ ನಿರ್ದೇಶಕ ರಂಜನ್ ಮಥಾಯಿ ರಾಜೀನಾಮೆ
ಹೊಸದಿಲ್ಲಿ, ನ. 23: ಸಾಲದಲ್ಲಿ ಮುಳುಗಿರುವ ಜೆಟ್ ಏರ್ವೇಸ್ನ ಸ್ವತಂತ್ರ ನಿರ್ದೇಶಕ ರಂಜನ್ ಮಥಾಯಿ ಗುರುವಾರ ರಾಜೀನಾಮೆ ನೀಡಿದ್ದಾರೆ.
ಇತರ ಬದ್ದತೆಗಳಿಂದ ಒತ್ತಡ ಹೆಚ್ಚುತ್ತಿರುವುದರಿಂದ ತಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ. ಸಾಲದ ಹೊರೆ ಏರಿಕೆಯಾಗುತ್ತಿರುವುದು, ಅತ್ಯಧಿಕ ತೈಲ ಬೆಲೆಯಿಂದ ಲಾಭ ಕಡಿಮೆ ಆಗುತ್ತಿರುವುದರಿಂದ ಏರ್ಲೈನ್ಸ್ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದೆ. ಈ ನಡುವೆ ರಂಜನ್ ಮಥಾಯಿ ರಾಜೀನಾಮೆ ನೀಡಿದ್ದಾರೆ.
ನಾವು ಜೆಟ್ನೊಂದಿಗೆ ಪ್ರಾಥಮಿಕ ಮಾತುಕತೆ ನಡೆಸಿದ್ದೇವೆ. ಆದರೆ, ಜೆಟ್ ಅನ್ನು ಖರೀದಿಸುವ ಪ್ರಸ್ತಾಪ ಇರಿಸಿಲ್ಲ ಎಂದು ಕಳೆದ ವಾರ ಟಾಟಾ ಸನ್ಸ್ ಲಿಮಿಟೆಡ್ ಹೇಳಿತ್ತು. ನನ್ನ ಬಾಧ್ಯತೆ ಪೂರೈಸಲು ಅಗತ್ಯತೆ ಇರುವ ಸಮಯ ಮೀಸಲಿರಿಸಲು ಸಾಧ್ಯವಿಲ್ಲ. ಆದುದರಿಂದ ಜೆಟ್ ಏರ್ವೇಸ್ನ ಸ್ವತಂತ್ರ ನಿದೇರ್ಶಕನ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದೆ ಎಂದು ಮಥಾಯಿ ಹೇಳಿದ್ದಾರೆ.
Next Story