ಸ್ಥಳೀಯ ರೈಲಿನಲ್ಲಿ ಸ್ಫೋಟ: 11 ಮಂದಿಗೆ ಗಾಯ
ಅಸ್ಸಾಂ, ಡಿ.1: ಇಲ್ಲಿನ ರಂಗಿಯಾ-ದೇಕರ್ಗಾಂವ್ ಸ್ಥಳೀಯ ರೈಲಿನಲ್ಲಿ ಸ್ಫೋಟ ಸಂಭವಿಸಿದ್ದು, 11 ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಅಸ್ಸಾಂನ ಉದಲ್ಗುರಿಯಲ್ಲಿ ಈ ಘಟನೆ ನಡೆದಿದೆ.
ಒಂದು ಬೋಗಿಯಲ್ಲಿ ಈ ಸ್ಫೋಟ ಸಂಭವಿಸಿತ್ತು ಎನ್ನಲಾಗಿದೆ. ಸ್ಫೋಟಕ್ಕೆ ಕಾರಣ ಏನೆಂಬುದು ಹಾಗು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
Next Story