ಹಿಂದಿ ಕಿರುತೆರೆಯ ಹಾಸ್ಯನಟ ಕಪಿಲ್ ಶರ್ಮಾ ವಿವಾಹ
ಜಲಂಧರ್, ಡಿ.12: ಹಾಸ್ಯನಟ-ನಟ ಕಪಿಲ್ ಶರ್ಮಾ ತನ್ನ ದೀರ್ಘಕಾಲದ ಗೆಳತಿ ಗಿನ್ನಿ ಚಟ್ರಾತ್ರನ್ನು ಜಲಂಧರ್ನಲ್ಲಿ ಬುಧವಾರ ವಿವಾಹವಾದರು. ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಕಪಿಲ್-ಗಿನ್ನಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಡಿ.14 ರಂದು ಅಮೃತಸರದಲ್ಲಿ ವಿವಾಹ ಆರತಕ್ಷತೆ ನಡೆಯಲಿದೆ. ಕಪಿಲ್ ತನ್ನ ಟಿವಿ ಹಾಗೂ ಚಿತ್ರರಂಗದ ಸ್ನೇಹಿತರಿಗೆ-ಹಿತೈಷಿಗಳಿಗೆ ಮುಂಬೈನಲ್ಲಿ ಡಿ.24 ರಂದು ರಿಸೆಪ್ಶನ್ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಿದ್ದಾರೆ.
Next Story