ಎರಡು ತಿಂಗಳ ಬಳಿಕ ಪೆಟ್ರೋಲ್ ಬೆಲೆ ಏರಿಕೆ
ಮುಂಬೈ,ಡಿ.13: ಸುಮಾರು ಎರಡು ತಿಂಗಳುಗಳಿಂದಲೂ ಇಳಿಕೆಯ ಹಾದಿಯಲ್ಲಿದ್ದ ಪೆಟ್ರೋಲ್ ಬೆಲೆಗಳು ಗುರುವಾರ ದೇಶದ ನಾಲ್ಕು ಮಹಾನಗರಗಳ ಪೈಕಿ ಮೂರರಲ್ಲಿ ಅಲ್ಪಪ್ರಮಾಣದಲ್ಲಿ ಏರಿಕೆಯನ್ನು ಕಂಡಿವೆ.
ಅಕ್ಟೋಬರ್ ಮಧ್ಯದ ವೇಳೆಗೆ ಗಗನಕ್ಕೇರಿದ್ದ ಇಂಧನ ಬೆಲೆಗಳು ಕಳೆದ ಎರಡು ತಿಂಗಳುಗಳಲ್ಲಿ ಶೇ.15ಕ್ಕೂ ಹೆಚ್ಚು ಇಳಿಕೆಯಾಗಿದ್ದವು.
ಗುರುವಾರ ದಿಲ್ಲಿ,ಮುಂಬೈ ಮತ್ತು ಚೆನ್ನೈಗಳಲ್ಲಿ ಪೆಟ್ರೋಲ್ ಬೆಲೆಗಳು ಪ್ರತಿ ಲೀಟರ್ಗೆ ಅನುಕ್ರಮವಾಗಿ 9,11 ಮತ್ತು 13 ಪೈಸೆ ಏರಿಕೆಯನ್ನು ಕಂಡಿವೆ. ಆದರೆ ಕೋಲ್ಕತಾದಲ್ಲಿ 90 ಪೈಸೆ ಇಳಿಕೆಯಾಗಿದೆ.
ಗುರುವಾರ ಕೋಲ್ಕತಾದಲ್ಲಿ ಡೀಸೆಲ್ ಪ್ರತಿ ಲೀ.ಗೆ ಒಂದು ರೂ.ಇಳಿಕೆಯಾಗಿದ್ದರೆ,ಉಳಿದ ಮೂರು ಮಹಾನಗರಗಳಲ್ಲಿ ಬುಧವಾರದ ಬೆಲೆಗಳೇ ಮುಂದುವರಿದಿದ್ದವು.
Next Story