ಕಾಂಗ್ರೆಸ್ ಬಿಡುಗಡೆಗೊಳಿಸಿದ ‘ರಫೇಲ್ ಆಡಿಯೋ’ ಕುರಿತು ಪಾರಿಕ್ಕರ್ ಪ್ರತಿಕ್ರಿಯೆ
ಪಣಜಿ,ಜ.2: ರಫೇಲ್ ಒಪ್ಪಂದದ ಕುರಿತು ಕಾಂಗ್ರೆಸ್ ಉಲ್ಲೇಖಿಸಿರುವ ಆಡಿಯೋ ತುಣುಕನ್ನು ‘ಸರ್ವೋಚ್ಚ ನ್ಯಾಯಾಲಯವು ಪ್ರತಿಪಕ್ಷದ ಸುಳ್ಳುಗಳನ್ನು ಬಯಲಿಗೆಳೆದ ಬಳಿಕ ಕಟ್ಟುಕಥೆಯನ್ನು ಹೆಣೆಯುವ ಕಾಂಗ್ರೆಸ್ನ ಹತಾಶ ಪ್ರಯತ್ನವಾಗಿದೆ’ ಎಂದು ಗೋವಾ ಮುಖ್ಯಮಂತ್ರಿ ಮನೋಹರ ಪಾರ್ರಿಕರ್ ಅವರು ಬುಧವಾರ ಇಲ್ಲಿ ಬಣ್ಣಿಸಿದರು.
ರಫೇಲ್ ಒಪ್ಪಂದದ ಕುರಿತು ಕಡತವು ತನ್ನ ಬೆಡ್ರೂಮ್ನಲ್ಲಿದೆ ಎಂದು ಪಾರಿಕ್ಕರ್ ಹೇಳಿದ್ದಾಗಿ ಗೋವಾದ ಆರೋಗ್ಯ ಸಚಿವ ವಿಶ್ವಜಿತ್ ರಾಣೆಯವರು ಆಡಿಯೋದಲ್ಲಿ ಹೇಳಿದ್ದಾರೆ ಎಂದು ಕಾಂಗ್ರೆಸ್ ಪ್ರತಿಪಾದಿಸಿತ್ತು. ರಫೇಲ್ ಯುದ್ಧ ವಿಮಾನಗಳ ಖರೀದಿಗಾಗಿ ಭಾರತ ಮತ್ತು ಫ್ರಾನ್ಸ್ ಒಪ್ಪಂದಕ್ಕೆ ಸಹಿ ಹಾಕಿದ್ದ ಸಂದರ್ಭ ಪಾರಿಕ್ಕರ್ ರಕ್ಷಣಾ ಸಚಿವರಾಗಿದ್ದರು.
Next Story