ಜ. 26: ಬರ್ಖಾ ದತ್, ಕರಣ್ ಥಾಪರ್ ನೇತೃತ್ವದ ಹೊಸ ಚಾನೆಲ್ ಆರಂಭ
ಕರಣ್ ಥಾಪರ್ - ಬರ್ಖಾ ದತ್
ಹೊಸದಿಲ್ಲಿ, ಜ. 18: ಹಿರಿಯ ಪತ್ರಕರ್ತರಾದ ಬರ್ಖಾ ದತ್ ಹಾಗೂ ಕರಣ್ ಥಾಪರ್ ಅವರು ಮುಖ್ಯ ನಿರೂಪಕರಾಗಿರುವ ಹೊಸ ಟಿವಿ ಚಾನೆಲ್ 'ಹಾರ್ವೆಸ್ಟ್ ಟಿವಿ' ಜನವರಿ 26ರಂದು ಆರಂಭಗೊಳ್ಳಲಿದೆಯೆಂಬ ಸುದ್ದಿ ಮಾಧ್ಯಮ ವಲಯದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಮೂಲಗಳ ಪ್ರಕಾರ ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಈ ಹೊಸ ಸುದ್ದಿ ವಾಹಿನಿಯ ಆರ್ಥಿಕ ಬೆನ್ನೆಲುಬಾಗಿ ನಿಂತಿದ್ದಾರೆ.
ಅತ್ತ ಅರ್ನಬ್ ಗೋಸ್ವಾಮಿ ನೇತೃತ್ವದ ರಿಪಬ್ಲಿಕ್ ಟಿವಿ ತನ್ನ ಹಿಂದಿ ವಾಹಿನಿ 'ರಿಪಬ್ಲಿಕ್ ಭಾರತ್' ಅನ್ನು ಅದೇ ದಿನ ಆರಂಭಿಸಲಿದೆ. ತನ್ನ ಆರಂಭದ ಮುನ್ನ ಈ ವಾಹಿನಿ `ಪೂಛ್ ತಾ ಹೇ ಭಾರತ್' ಎಂಬ ಅಭಿಯಾನವನ್ನು ಆರಂಭಿಸಿದ್ದು ಇದು ನಿಜವಾದ ಉದ್ದೇಶಗಳು, ವಿಷಯಗಳಿಗಾಗಿ ಹೋರಾಟವೆಂದು ಸಂಸ್ಥೆ ಬಿಂಬಿಸಿದೆ.
ಇನ್ನೊಂದೆಡೆ ನೆಟ್ವರ್ಕ್-18 ವಾಹಿನಿ ತನ್ನ ಮೊದಲ ಸಾಪ್ತಾಹಿಕ `ಫಸ್ಟ್ ಪೋಸ್ಟ್' ಜನವರಿ 26ರಂದು ಬಿಡುಗಡೆಗೊಳಿಸಲಿದೆ. ಫಸ್ಟ್ ಪೋಸ್ಟ್.ಕಾಂ ಎಂಬ ಸುದ್ದಿ ವಾಹಿನಿ 2010ರಲ್ಲಿ ಆರಂಭಗೊಂಡ ಒಂಬತ್ತು ವರ್ಷಗಳ ನಂತರ ಈ ಸಾಪ್ತಾಹಿಕವನ್ನು ಹೊರತರಲಾಗುತ್ತಿದೆ.
Next Story