ಮೈದಾನದಲ್ಲಿ ಬಿಜೆಪಿ ನಾಯಕನ ಮೃತದೇಹ ಪತ್ತೆ
ವಾರದಲ್ಲಿ 2ನೆ ಘಟನೆ
ಮಧ್ಯಪ್ರದೇಶ, ಜ.20: ಇಲ್ಲಿನ ಬಿಜೆಪಿ ನಾಯಕ ಮನೋಜ್ ಠಾಕ್ರೆ ಎಂಬವರು ಮೈದಾನವೊಂದರಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬರ್ವಾನಿಯಲ್ಲಿ ನಡೆದಿದೆ. ಈ ವಾರದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ 2ನೆ ಬಿಜೆಪಿ ನಾಯಕನ ಹತ್ಯೆ ಇದಾಗಿದೆ.
“ಕಾಂಗ್ರೆಸ್ ಸರಕಾರವು ಒಂದರ ನಂತರ ಮತ್ತೊಂದರಂತೆ ಬಿಜೆಪಿ ನಾಯಕರ ಹತ್ಯೆಯನ್ನು ಕ್ರೂರ ಹಾಸ್ಯ ಮಾಡುತ್ತಿದೆ” ಎಂದು ಶಿವರಾಜ್ ಸಿಂಗ್ ಚೌಹಾಣ್ ಆರೋಪಿಸಿದ್ದಾರೆ.
“ಒಂದರ ನಂತರ ಮತ್ತೊಂದು, ಬಿಜೆಪಿ ನಾಯಕರ ಹತ್ಯೆ ಗಂಭೀರ ವಿಚಾರ. ರಾಜ್ಯ ಸರಕಾರವು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ” ಎಂದು ಚೌಹಾಣ್ ಟ್ವೀಟ್ ಮಾಡಿದ್ದಾರೆ.
Next Story