ಹತ್ಯೆಗೀಡಾದ ಪೊಲೀಸ್ ಅಧಿಕಾರಿಯ ಫೋನ್ ಆರೋಪಿಯ ಮನೆಯಲ್ಲಿ ಪತ್ತೆ
ಬುಲಂದ್ ಶಹರ್ ಹಿಂಸಾಚಾರ
ಹೊಸದಿಲ್ಲಿ, ಜ.27: ಬುಲಂದ್ ಶಹರ್ ಹಿಂಸಾಚಾರದ ಸಂದರ್ಭ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪೊಲೀಸ್ ಅಧಿಕಾರಿ ಸುಬೋಧ್ ಕುಮಾರ್ ಸಿಂಗ್ ರ ಮೊಬೈಲ್ ಫೋನ್ ಆರೋಪಿಯ ಮನೆಯಲ್ಲಿ ಪತ್ತೆಯಾಗಿದೆ.
ಆರೋಪಿ ಪ್ರಶಾಂತ್ ನಟ್ ಮನೆ ಮೇಲೆ ಪೊಲೀಸರು ದಾಳಿ ನಡೆಸಿದಾಗ ಫೋನ್ ಲಭಿಸಿತ್ತು. ಡಿಸೆಂಬರ್ 28ರಂದು ಆತನನ್ನು ಬಂಧಿಸಲಾಗಿತ್ತು. ದಾಳಿಯ ವೇಳೆ ಪ್ರಶಾಂತ್ ನ ಮನೆಯಲ್ಲಿ ಇತರ 5 ಮೊಬೈಲ್ ಗಳು ಸಿಕ್ಕಿವೆ.
“ಮೊಬೈಲ್ ಫೋನ್ ನ ಲೊಕೇಶನ್ ಮಾಹಿತಿಯಾಧಾರದಲ್ಲಿ ನಾವು ದಾಳಿ ನಡೆಸಿದ್ದೆವು. ಪಿಸ್ತೂಲ್ ಗಾಗಿ ಹುಡುಕಾಟ ಮುಂದುವರೆದಿದೆ” ಎಂದು ಪೊಲೀಸ್ ಅಧಿಕಾರಿ ಅತುಲ್ ಶ್ರೀವಾಸ್ತವ ಹೇಳಿದ್ದಾರೆ.
Next Story