ಕೊಚ್ಚಿ ರಬ್ಬರ್ ಫ್ಯಾಕ್ಟರಿಯಲ್ಲಿ ಬೆಂಕಿ: ಸಮೀಪ ಕಟ್ಟಡದ ಜನರ ತೆರವು
ಕೊಚ್ಚಿ, ಫೆ.20: ಕೇರಳದ ಕೊಚ್ಚಿಯಲ್ಲಿ ಬುಧವಾರ ಮಧ್ಯಾಹ್ನ ರಬ್ಬರ್ ಫ್ಯಾಕ್ಟರಿಯೊಂದರಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು ಯಾವುದೇ ಸಾವು-ನೋವಾಗಿರುವ ಬಗ್ಗೆ ವರದಿಯಾಗಿಲ್ಲ.
ಎರ್ನಾಕುಲಂನ ದಕ್ಷಿಣ ರೈಲ್ವೆ ಸ್ಟೇಶನ್ ಸಮೀಪದ ಐದು ಮಹಡಿಯ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಫ್ಯಾಕ್ಟರಿ ಸಮೀಪವಿರುವ ಕಟ್ಟಡದಲ್ಲಿ ವಾಸವಾಗಿರುವ ಜನರನ್ನು ತೆರವುಗೊಳಿಸಲಾಗಿದೆ.
ಬೆಂಕಿ ನಂದಿಸಲು ಅಗ್ನಿ ಶಾಮಕ ದಳ ಘಟನಾ ಸ್ಥಳಕ್ಕೆ ತೆರಳಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ದಪ್ಪ, ಕಪ್ಪು ಹೊಗೆ ಫ್ಯಾಕ್ಟರಿಯ ಮೊದಲ ಮಹಡಿಯಿಂದ ಹೊರಹೊಮ್ಮುವ ದೃಶ್ಯ ಕಂಡುಬಂದಿದೆ.
Next Story