ಮಾಜಿ ಐಎಎಸ್ ಅಧಿಕಾರಿ ಶಾ ಫೈಝಲ್ ರ ಪಕ್ಷದ ಹೆಸರೇನು ಗೊತ್ತಾ ?
ಜಮ್ಮುಕಾಶ್ಮೀರ, ಮಾ. 16: ಮಾಜಿ ಐಎಎಸ್ ಅಧಿಕಾರಿ ಶಾ ಫೈಝಲ್ ನಗರದ ರಾಜ್ಬಾಗ್ನಲ್ಲಿ ರವಿವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜಕೀಯ ಪಕ್ಷ ‘ಜಮ್ಮು ಹಾಗೂ ಕಾಶ್ಮೀರ ಪೀಪಲ್ಸ್ ಮೂವ್ಮೆಂಟ್’ ಆರಂಭಿಸಲಿದ್ದಾರೆ.
ರಾಜ್ಬಾಗ್ನ ಗಿಂಡುನ್ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾಶ್ಮೀರಿಗಳು ಹಾಗೂ ಅಂಚಿಗೆ ತಳ್ಳಲ್ಪಟ್ಟ ಭಾರತೀಯ ಮುಸ್ಲಿಮರ ಹತ್ಯೆಗಳನ್ನು ಪ್ರತಿಭಟಿಸಿ 2010ರ ಬ್ಯಾಚ್ನ ಯುಪಿಎಸ್ಸಿ ಟಾಪರ್ ಆಗಿದ್ದ ಫೈಝಲ್ ಐಎಎಸ್ಗೆ ರಾಜೀನಾಮೆ ನೀಡಿದ್ದರು.
ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಫೈಝಲ್, ಕೇಂದ್ರ ಸರಕಾರ ಆರ್ಬಿಐ, ಸಿಬಿಐ ಹಾಗೂ ಎನ್ಐಎಯಂತಹ ಸಂಸ್ಥೆಗಳನ್ನು ಬುಡಮೇಲುಗೊಳಿಸಿದೆ. ಈ ನಡೆ ದೇಶದ ಸಾವಿಧಾನಕ ವಿನ್ಯಾಸವನ್ನು ನಾಶ ಮಾಡುವ ಸಾಧ್ಯತೆ ಇದೆ. ಇದನ್ನು ನಿಲ್ಲಿಸುವ ಅಗತ್ಯತೆ ಇದೆ ಎಂದಿದ್ದಾರೆ.
ಐಎಎಸ್ಗೆ ರಾಜೀನಾಮೆ ನೀಡಿದ ಬಳಿಕ ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತ, ಸ್ವಚ್ಛ ಹಾಗೂ ಪಾರದರ್ಶಕ ರಾಜಕೀಯ ಆರಂಭಿಸಲು ಬೆಂಬಲ ಪಡೆಯುವ ಉದ್ದೇಶದಿಂದ ಯುವ ಸಾಧಕಕರೊಂದಿಗೆ ಅವರು ಸಂವಹನ ನಡೆಸುತ್ತಿದ್ದಾರೆ.
ತನ್ನ ಕೆಲಸಗಳಿಗೆ ಬೆಂಬಲಕ್ಕಾಗಿ ಜನವರಿಯಿಂದ ಕ್ರೌಡ್ ಫಂಡಿಂಗ್ ಅನ್ನು ಕೂಡ ಅವರು ಆರಂಭಿಸಿದ್ದಾರೆ. ಹಲವು ಯುವಕರು ಹಾಗೂ ರಾಜಕಾರಣಿಗಳು ಫೈಝಲ್ ಅವರ ರಾಜಕೀಯ ಪಕ್ಷಕ್ಕೆ ಸೇರುವ ಸಾಧ್ಯತೆ ಇದೆ.