ಬಿಹಾರ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮ
ಹೊಸದಿಲ್ಲಿ, ಮಾ.22: ಬಿಹಾರದಲ್ಲಿ ಸ್ಪರ್ಧಿಸಲಿರುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದ್ದು , ಮಿತ್ರ ಪಕ್ಷಗಳ ಜೊತೆ ಜಂಟಿಯಾಗಿ ಪಟ್ಟಿಯನ್ನು ಬಿಡುಗಡೆಗೊಳಿಸಲಾಗುವುದು ಎಂದು ಹಿರಿಯ ಬಿಜೆಪಿ ಮುಖಂಡ ಜೆಪಿ ನಡ್ಡ ಹೇಳಿದ್ದಾರೆ.
ಪಾಟ್ನಾ ಸಾಹಿಬ್ ಹಾಗೂ ಮಧುಬನಿ ಕ್ಷೇತ್ರ ಹೊರತುಪಡಿಸಿ ಬಹುತೇಕ ಕ್ಷೇತ್ರಗಳಲ್ಲಿ ಹಾಲಿ ಸಂಸದರಿಗೇ ಟಿಕೆಟ್ ದೊರಕುವ ನಿರೀಕ್ಷೆಯಿದೆ . ಪಾಟ್ನಾಸಾಹಿಬ್ ಕ್ಷೇತ್ರದಲ್ಲಿ ಹಾಲಿ ಸಂಸದ ಶತ್ರುಘ್ನ ಸಿನ್ಹರ ಬದಲು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ರನ್ನು ಹಾಗೂ ಮಧುಬನಿ ಕ್ಷೇತ್ರದಿಂದ ಹಾಲಿ ಸಂಸದ ಹುಕುಮ್ದೇವ್ ನಾರಾಯಣ್ ಯಾದವ್ ಸ್ಪರ್ಧೆಗೆ ಆಸಕ್ತಿ ತೋರದ ಕಾರಣ ಅವರ ಪುತ್ರನಿಗೆ ಟಿಕೆಟ್ ದೊರಕುವ ನಿರೀಕ್ಷೆಯಿದೆ.
ಬಿಹಾರದಲ್ಲಿ ಜೆಡಿಯು ಮತ್ತು ಎಲ್ಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ 17 ಸ್ಥಾನದಲ್ಲಿ ಸ್ಪರ್ಧಿಸಲಿದೆ.
Next Story