ಕನ್ಹಯ್ಯ ಪರ ಪ್ರಚಾರಕ್ಕೆ ಬರಲಿದೆ ಬಾಲಿವುಡ್ ದಂಡು
ಹೊಸದಿಲ್ಲಿ, ಮಾ.31: ಬಿಹಾರದ ಬೇಗುಸರಾಯ್ ಕ್ಷೇತ್ರದಿಂದ ಕಣಕ್ಕಿಳಿಯಲಿರುವ ಸಿಪಿಐ ಅಭ್ಯರ್ಥಿ, ಜೆಎನ್ ಯು ವಿದ್ಯಾರ್ಥಿ ಸಂಘದ ಮಾಜಿ ನಾಯಕ ಕನ್ಹಯ್ಯ ಕುಮಾರ್ ಪರ ಪ್ರಚಾರಕ್ಕೆ ಬಾಲಿವುಡ್ ನ ಹಲವು ಸೆಲೆಬ್ರಿಟಿಗಳು ಆಗಮಿಸಲಿದ್ದಾರೆ ಎಂದು ವರದಿಯಾಗಿದೆ.
ಹಿರಿಯ ನಟಿ ಶಬನಾ ಅಝ್ಮಿ, ಸ್ವರಾ ಭಾಸ್ಕರ್, ಪ್ರಕಾಶ್ ರೈ, ಜಾವೇದ್ ಅಖ್ತರ್, ಪ್ರಸಿದ್ಧ ನಿರ್ದೇಶಕ ಇಮ್ತಿಯಾಝ್ ಅಲಿ ಹಾಗು ಟಿವಿ, ರಂಗಭೂಮಿ ಕಲಾವಿದೆ ಸೋನಾಲ್ ಝಾ ಕನ್ಹಯ್ಯ ಪರ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ. ಇವರೊಂದಿಗೆ ನರ್ಮದಾ ಬಚಾವೋ ಆಂದೋಲನ ಹೋರಾಟಗಾರ್ತಿ ಮೇಧಾ ಪಾಟ್ಕರ್ ಮತ್ತು ಹಾರ್ದಿಕ್ ಪಟೇಲ್ ಕೈಜೋಡಿಸಲಿದ್ದಾರೆ.
32 ವರ್ಷದ ಕನ್ಹಯ್ಯ ಕುಮಾರ್ ಬಿಜೆಪಿಯ ಗಿರಿರಾಜ್ ಸಿಂಗ್ ವಿರುದ್ಧ ಕಣಕ್ಕಿಳಿಯಲಿದ್ದಾರೆ.
Next Story