ನಾನು ಶೌಚಾಲಯಗಳ ಚೌಕೀದಾರ್: ಪ್ರಧಾನಿ ಮೋದಿ
ಹೊಸದಿಲ್ಲಿ, ಎ.1: ನಾನು ಶೌಚಾಲಯಗಳ ಚೌಕೀದಾರ್ ಆಗಿದ್ದು, ಈ ಬಗ್ಗೆ ನನಗೆ ಹೆಮ್ಮೆಯಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಅವರು, “ನಾನು ಶೌಚಾಲಯಗಳ ಚೌಕೀದಾರನಾಗಿದ್ದು, ಈ ಮೂಲಕ ದೇಶದ ಮಹಿಳೆಯರನ್ನು ರಕ್ಷಿಸುತ್ತಿದ್ದೇನೆ” ಎಂದರು.
2 ದಿನಗಳ ಮೊದಲು ಕಾಂಗ್ರೆಸ್ ನಾಯಕನೊಬ್ಬ ತನ್ನನ್ನು ‘ಶೌಚಾಲಯಗಳ ಚೌಕೀದಾರ’ ಎಂಬುದಾಗಿ ಕರೆದಿದ್ದ ಎಂದ ಅವರು, “ಇಂತಹ ಹೇಳಿಕೆಗಳು ನೈರ್ಮಲ್ಯ ಕಾರ್ಮಿಕರನ್ನು ಅವಮಾನಿಸುವುದಲ್ಲವೇ” ಎಂದು ಪ್ರಶ್ನಿಸಿದರು.
Next Story