ನೀವು ಇವಿಎಂ ದುರ್ಬಳಕೆ ಮಾಡಿದ್ದರೂ ನಿಮ್ಮ ಹಿತೈಷಿ ನಾನು
ಮೋದಿಗೆ ಕುಟುಕಿದ ಶತ್ರುಘ್ನ ಸಿನ್ಹಾ
ಹೊಸದಿಲ್ಲಿ, ಎ. 2: ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ಬಳಿಕ ಇತ್ತೀಚೆಗೆ ಕಾಂಗ್ರೆಸ್ ಸೇರಿದ ನಟ-ರಾಜಕಾರಣಿ ಶತ್ರುಘ್ನ ಸಿನ್ಹಾ, ಸರಣಿ ಟ್ವೀಟ್ ಮಾಡಿ ಮೋದಿ ಅವರನ್ನು ‘‘ಗೌರವಾನ್ವಿತ ನಿರ್ಗಮಿಸುತ್ತಿರುವ ಸರ್ಜಿ’’ ಎಂದು ಸಂಬೋಧಿಸಿದ್ದಾರೆ.
ಮೋದಿ ಅವರನ್ನು ಗಂಭೀರವಾಗಿ ಟೀಕಿಸುವ ಟ್ವೀಟ್ಗಳಲ್ಲಿ ಶತ್ರುಘ್ನ ಸಿನ್ಹಾ ಅವರು ಮೋದಿಯನ್ನು ‘ಸರ್-ಜಿ’ ಎಂದು ಉಲ್ಲೇಖಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ಕುರಿತು ಟೀಕಿಸಿರುವ ಶತ್ರುಘ್ನ ಸಿನ್ಹಾ, ಅವರ ಭಾಷಣದಲ್ಲಿ ವಿಷಯ ಹಾಗೂ ಗಹನತೆಯ ಕೊರತೆ ಇದೆ ಎಂದಿದ್ದಾರೆ. ‘‘ಸರ್ಜಿ, ನೀವು ಇವಿಎಂಗಳನ್ನು ದುರ್ಬಳಕೆ ಮಾಡಿದ್ದರೂ ಹಾಗೂ ನಿಮ್ಮ ಎಲ್ಲ ಅಹಂಕಾರದ ಹೊರತಾಗಿಯೂ ನಾನು ಈಗಲೂ ನಿಮ್ಮ ಹಿತಾಕಾಂಕ್ಷಿಯಾಗಿದ್ದೇನೆ. ಈ ಕೊನೆಯ ಕ್ಷಣದಲ್ಲಾದರೂ ನೇರವಾಗಿ ಇರಿ ಹಾಗೂ ನೇರವಾಗಿ ನಡೆಯಿರಿ’’ ಎಂದು ಶತ್ರುಘ್ನ ಸಿನ್ಹಾ ಟ್ವೀಟ್ ಮಾಡಿದ್ದಾರೆ.
Next Story