ವರುಣ್ ಗಾಂಧಿ ವಿರುದ್ಧ ಟೆಲಿಫೋನ್ ಬಿಲ್ ಪಾವತಿಸದ ಆರೋಪ: ಪಿಲಿಬಿಟ್ ಚುನಾವಣಾಧಿಕಾರಿಗೆ ಬಿಎಸ್ಎನ್ಎಲ್ ಪತ್ರ
ಹೊಸದಿಲ್ಲಿ, ಎ. 8: ಬಿಜೆಪಿ ಸಂಸದ ವರುಣ್ ಗಾಂಧಿ ಅವರು ತಮ್ಮ ಪಿಲಿಬಿಟ್ನ ಕಚೇರಿ ದೂರವಾಣಿಯ ಶುಲ್ಕ 38,616 ರೂಪಾಯಿ ಪಾವತಿಸಲು ಬಾಕಿ ಇದೆ ಎಂದು ಎಂದು ಆರೋಪಿಸಿ ಬಿಎಸ್ಎನ್ಎಲ್ ಪಿಲಿಬಿಟ್ ಜಿಲ್ಲಾ ಚುನಾವಣಾಧಿಕಾರಿಗೆ ಪತ್ರ ಬರೆದಿದೆ.
ಹಲವು ಬಾರಿ ನೆನಪಿಸಿದರೂ ವರುಣ್ ಗಾಂಧಿ ಅವರು ಇನ್ನು ಕೂಡ ಬಾಕಿ ಶುಲ್ಕ ಪಾವತಿಸಿಲ್ಲ ಎಂದು ಪತ್ರದಲ್ಲಿ ಬಿಎಸ್ಎನ್ಎಲ್ ಹೇಳಿದೆ.
2009ರಿಂದ 2014ರ ಅವಧಿಯಲ್ಲಿ ವರುಣ್ ಗಾಂಧಿ ಪಿಲಿಬಿಟ್ನ ಸಂಸದರಾಗಿದ್ದರು. ಈ ಸಂದರ್ಭ ಪಿಲಿಬಿಟ್ ಕ್ಷೇತ್ರದ ಅವರ ಕಚೇರಿಗೆ 05882-256525 ಸಂಖ್ಯೆಯ ದೂರವಾಣಿ ಸಂಪರ್ಕ ನೀಡಲಾಗಿತ್ತು. ಇದರ ಶುಲ್ಕ 38616,00 ಬಾಕಿ ಇದೆ ಎಂದು ಪಿಲಿಬಿಟ್ನ ಬಿಎಸ್ಎನ್ಎಲ್ನ ಅಕೌಂಟ್ ಅಧಿಕಾರಿ ಪತ್ರದಲ್ಲಿ ಹೇಳಲಾಗಿದೆ.
ವರುಣ್ ಗಾಂಧಿ ಅವರು ಮುಂಬರುವ ಲೋಕಸಭಾ ಚುನಾವಣೆಗೆ ಪಿಲಿಬಿಟ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ಪಿಲಿಬಿಟ್ ಬಿಎಸ್ಎನ್ಎಲ್ನಿಂದ ‘ನೋ ಡ್ಯೂ’ ಪ್ರಮಾಣ ಪತ್ರ ಪಡೆದುಕೊಂಡಿಲ್ಲ ಎಂದು ಕೂಡ ಬಿಎಸ್ಎನ್ಎಲ್ನ ಪತ್ರ ಹೇಳಿದೆ.
Next Story