‘ಪಿಎಂ ನರೇಂದ್ರ ಮೋದಿ’ ಚಿತ್ರಕ್ಕೆ ಹೇರಿದ ನಿಷೇಧ ‘ನಮೋ ಟಿವಿ’ಗೂ ಅನ್ವಯ: ಚು. ಆಯೋಗದ ಮೂಲಗಳು
ಹೊಸದಿಲ್ಲಿ, ಎ.10: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಪರ 24 ಗಂಟೆ ಪ್ರಚಾರ ಮಾಡುತ್ತಿರುವ ‘ನಮೋ ಟಿವಿ’ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಾರ್ಯ ನಿರ್ವಹಿಸಬಾರದು ಎಂದು ಚು. ಆಯೋಗದ ಮೂಲಗಳು ತಿಳಿಸಿದ್ದಾಗಿ ಎನ್ ಡಿಟಿವಿ ವರದಿ ಮಾಡಿದೆ.
ಚುನಾವಣಾ ಆಯೋಗ ಪ್ರಧಾನಿ ನರೇಂದ್ರ ಮೋದಿ ಅವರ ಬಯೋಪಿಕ್ ಬಿಡುಗಡೆಗೆ ನಿಷೇಧ ಹೇರಿರುವುದು ನಮೋ ಟಿ.ವಿ.ಗೆ ಕೂಡ ಅನ್ವಯಿಸುತ್ತದೆ. ಆದುದರಿಂದ ಚುನಾವಣಾ ಸಮಯದಲ್ಲಿ ನಮೋ ಟಿ.ವಿ. ಪ್ರಸಾರ ಮಾಡುವಂತಿಲ್ಲ ಎಂದು ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ ಎಂದು ವರದಿಯಾಗಿದೆ.
Next Story