ರೇವ್ ಪಾರ್ಟಿಯ ಮೇಲೆ ದಾಳಿ,192 ಜನರ ಬಂಧನ
ನೊಯ್ಡ,ಮೇ 5: ಶನಿವಾರ ತಡರಾತ್ರಿ ಇಲ್ಲಿಯ ತೋಟದ ಮನೆಯೊಂದರಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ರೇವ್ ಪಾರ್ಟಿಯ ಮೇಲೆ ದಾಳಿ ನಡೆಸಿದ ಪೊಲೀಸರು 161 ಪುರುಷರು ಮತ್ತು 31 ಮಹಿಳೆಯರನ್ನು ಬಂಧಿಸಿದ್ದಾರೆ.
ಪಾರ್ಟಿಯಲ್ಲಿ ಅಕ್ರಮವಾಗಿ ಮದ್ಯ ಮತ್ತು ಇತರ ಮಾದಕ ದ್ರವ್ಯಗಳನ್ನು ಪೂರೈಸಲಾಗುತ್ತಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.
ಬಂಧಿತರಲ್ಲಿ ಹೆಚ್ಚಿನವರು ದಿಲ್ಲಿಯವರಾಗಿದ್ದು,ಕೆಲವರು ಹರ್ಯಾಣ ಮತ್ತು ನೊಯ್ಡದವರಾಗಿದ್ದಾರೆ. ಪಾರ್ಟಿಯ ಸಂಘಟಕರ ಪೈಕಿ ಐವರನ್ನು ಬಂಧಿಸಿರುವ ಪೊಲೀಸರು ಮದ್ಯದ ಬಾಟ್ಲಿಗಳು, ಹುಕ್ಕಾ ಇತ್ಯಾದಿಗಳನ್ನು ವಶಪಡಿಸಿಕೊಂಡಿದ್ದಾರೆ.
Next Story