‘ಭಾರತ ಮತ್ತೊಮ್ಮೆ ಗೆದ್ದಿದೆ': ಲೋಕಸಭಾ ಚುನಾವಣೆ ಗೆಲುವಿನ ಬಗ್ಗೆ ಪ್ರಧಾನಿ ಟ್ವೀಟ್
ಹೊಸದಿಲ್ಲಿ, ಮೇ 23: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಭಾರೀ ಗೆಲುವಿನತ್ತ ದಾಪುಗಾಲಿಡುತ್ತಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ, “ಭಾರತ ಮತ್ತೊಮ್ಮೆ ಗೆದ್ದಿದೆ'' ಎಂದು ಟ್ವೀಟ್ ಮಾಡಿದ್ದಾರೆ.
ಜತೆಯಾಗಿ ನಾವು ಬಲಿಷ್ಠ ಭಾರತವನ್ನು ನಿರ್ಮಿಸೋಣ ಎಂದು ಪ್ರಧಾನಿ ಹೇಳಿದ್ದಾರೆ. ``ಸಬ್ ಕಾ ಸಾಥ್ + ಸಬ್ ಕಾ ವಿಕಾಸ್ + ಸಬ್ ಕಾ ವಿಶ್ವಾಸ್ +ವಿಜಯೀ ಭಾರತ್. ಜತೆಯಾಗಿ ನಾವು ಬೆಳೆಯೋಣ, ಜತೆಯಾಗಿ ಅಭಿವೃದ್ಧಿಗೊಳ್ಳೋಣ. ಜತೆಯಾಗಿ ನಾವು ಬಲಿಷ್ಠ ಮತ್ತು ಸರ್ವರ ಶ್ರೇಯಸ್ಸನ್ನು ಬಯಸುವ ಭಾರತ ನಿರ್ಮಿಸೋಣ, ಇಂಡಿಯಾ ಮತ್ತೊಮ್ಮೆ ಗೆದ್ದಿದೆ #ವಿಜಯೀಭಾರತ್,'' ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
Next Story