ವಾರಣಾಸಿಯಲ್ಲಿ ಮೋದಿಗೆ ಭರ್ಜರಿ ಜಯ
ಲಕ್ನೊ, ಮೇ 23: ಪ್ರಧಾನಿ ನರೇಂದ್ರ ಮೋದಿ ಉತ್ತರಪ್ರದೇಶದ ವಾರಣಾಸಿ ಕ್ಷೇತ್ರದಿಂದ ಮರು ಆಯ್ಕೆಯಾಗಿದ್ದು ಸಮೀಪದ ಸ್ಪರ್ಧಿ, ಸಮಾಜವಾದಿ ಪಕ್ಷದ ಅಭ್ಯರ್ಥಿ ಶಾಲಿನಿ ಯಾದವ್ರನ್ನು 4,79,505 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಮೋದಿಗೆ 6,74,664 ಮತಗಳು, ಶಾಲಿನಿ ಯಾದವ್ಗೆ 1,95,159 ಮತ ದೊರೆತಿದೆ. ಕಾಂಗ್ರೆಸ್ ಅಭ್ಯರ್ಥಿ ಅಜಯ್ ರಾಜ್ 1,52,456 ಮತ ಗಳಿಸಿದ್ದಾರೆ. ಚಲಾವಣೆಯಾದ ಮತಗಳಲ್ಲಿ ಮೋದಿ ಶೇ.63.62 ಮತ, ಯಾದವ್ ಶೇ.18.4 ಮತಗಳನ್ನು ಪಡೆೆದಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 26 ಅಭ್ಯರ್ಥಿಗಳಿದ್ದು ‘ನೋಟಾ’ಗೆ 4037 ಮತ ಸಂದಿವೆ.
2014ರ ಲೋಕಸಭಾ ಚುನಾವಣೆಯಲ್ಲಿಯೂ ಇದೇ ಕೇತ್ರದಿಂದ ಸ್ಪರ್ಧಿಸಿದ್ದ ಮೋದಿ ತಮ್ಮ ಸಮೀಪದ ಸ್ಪರ್ಧಿ ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರೀವಾಲ್ರನ್ನು 3,71,784 ಮತಗಳ ಅಂತರದಿಂದ ಸೋಲಿಸಿದ್ದರು.
Next Story