ಉಗ್ರರಿಗೆ ಆರ್ಥಿಕ ನೆರವು ನೀಡುವ ಮೂಲಗಳಿಗೆ ಕಡಿವಾಣ ಹಾಕಲು ಪಾಕ್ ಗೆ ವಿಶ್ವ ಆರ್ಥಿಕ ಕ್ರಿಯಾ ಪಡೆ ಎಚ್ಚರಿಕೆ
ವಾಷಿಂಗ್ಟನ್, ಜೂ.22: ಉಗ್ರರಿಗೆ ಆರ್ಥಿಕವಾಗಿ ನೆರವು ನೀಡುತ್ತಿರುವ ಮೂಲಗಳಿಗೆ ಕೂಡಲೇ ಕಡಿವಾಣ ಹಾಕುವಂತೆ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆ ನಿಯೋಜಿತ ವಿಶ್ವ ಆರ್ಥಿಕ ಕ್ರಿಯಾಪಡೆ ಎಚ್ಚರಿಕೆ ನೀಡಿದೆ.
ಈ ಹಿಂದೆ ಪಾಕ್ ಗೆ ಕ್ರಿಯಾಪಡೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ, ಪಾಕಿಸ್ತಾನ ಯಾವುದೇ ಕ್ರಮಕೈಗೊಂಡಿಲ್ಲ.ಆಕ್ಟೋಬರ್ 2019ರ ಒಳಗಾಗಿ ಪಾಕಿಸ್ತಾನ ಉಗ್ರರ ಆರ್ಥಿಕ ನೆರವಿನ ಮೂಲವನ್ನು ತಡೆಯದಿದ್ದರೆ ಪಾಕಿಸ್ತಾನ ದೇಶವನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ವಿಶ್ವಸಂಸ್ಥೆ ನಿಯೋಜಿತ ವಿಶ್ವ ಆರ್ಥಿಕ ಕ್ರಿಯಾಪಡೆ ತಿಳಿಸಿದೆ.
Next Story