ಕಂಪೆನಿ ಮುಚ್ಚುವುದಿಲ್ಲ: ಬಿಎಸ್ಎನ್ಎಲ್
ಚೆನ್ನೈ, ಜೂ. 2: ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಮುಚ್ಚುವ ಮಾಧ್ಯಮ ವರದಿಯನ್ನು ವದಂತಿ ಎಂದು ತಳ್ಳಿ ಹಾಕಿರುವ ತಮಿಳುನಾಡು ಸರ್ಕಲ್ನ ಬಿಎಸ್ಎನ್ಎಲ್, ಕಂಪೆನಿಯನ್ನು ಮುಚ್ಚುವ ಯಾವುದೇ ಪ್ರಸ್ತಾವ ಇಲ್ಲ ಎಂದು ಮಂಗಳವಾರ ಹೇಳಿದೆ.
‘‘ಕೆಲವು ಮಾದ್ಯಮಗಳು ವರದಿ ಮಾಡಿದಂತೆ ಬಿಎಸ್ಎನ್ಎಲ್ ಅನ್ನು ಮುಚ್ಚುವ ಯಾವುದೇ ಪ್ರಸ್ತಾಪ ಇಲ್ಲ. ಕಠಿಣ ಸ್ಪರ್ಧೆ ಹಾಗೂ ಕಡಿಮೆ ದರದ ಕಾರಣಕ್ಕೆ ಬಿಎಸ್ಎನ್ಎಲ್ ಕಳೆದ ಕೆಲವು ತಿಂಗಳು ಹಣದ ಬಿಕ್ಕಟ್ಟು ಎದುರಿಸಿತ್ತು’’ ಎಂದು ಬಿಎಸ್ಎನ್ಎಲ್ನ ಹೇಳಿಕೆ ತಿಳಿಸಿದೆ.
ಬಿಎಎಸ್ಎನ್ಎಲ್ನ ಪುನರುಜ್ಚೀವನಕ್ಕೆ ಯೋಜನೆಯೊಂದನ್ನು ಕೇಂದ್ರ ಸರಕಾರ ಸಿದ್ದಪಡಿಸುತ್ತಿದೆ ಎಂದು ಹೇಳಿಕೆ ತಿಳಿಸಿದೆ.
Next Story