ಕಾಂಗ್ರೆಸ್ನ ಹಂಗಾಮಿ ಅಧ್ಯಕ್ಷರಾಗಿ ಸೋನಿಯಾಗಾಂಧಿ: ಪಂಜಾಬ್ ಸಿಎಂ ಅಮರಿಂದರ್ ಸ್ವಾಗತ
ಹೊಸದಿಲ್ಲಿ, ಆ.11: ಕಾಂಗ್ರೆಸ್ನ ಹಂಗಾಮಿ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಅವರನ್ನು ಆಯ್ಕೆ ಮಾಡಿರುವುದನ್ನು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸ್ವಾಗತಿಸಿದ್ದಾರೆ. ‘‘ಈಗಿನ ಪರಿಸ್ಥಿತಿಯಲ್ಲಿ ಇದೊಂದು ಉತ್ತಮ ನಿರ್ಧಾರ. ಈ ವರ್ಷದ ಲೋಕಸಭಾ ಚುನಾವಣೆಯಲ್ಲಿ ಭಾರೀ ಹೊಡೆತ ಅನುಭವಿಸಿರುವ ಪಕ್ಷಕ್ಕೆ ಅವರ ಅನುಭವ ಹಾಗೂ ಅರ್ಥೈಸಿಕೊಳ್ಳುವ ಗುಣ ನೆರವಿಗೆ ಬರಲಿದೆ. ಸೋನಿಯಾ ಗಾಂಧಿ ಜೀ ಮತ್ತೊಮ್ಮೆ ಅಧ್ಯಕ್ಷರಾಗಿದ್ದನ್ನು ನೋಡಲು ಖುಷಿಯಾಗುತ್ತಿದೆ. ಅವರಿಗೆ ಹಾಗೂ ಪಕ್ಷಕ್ಕೆ ಶುಭ ಹಾರೈಸುತ್ತೇನೆ’’ ಎಂದು ಸಿಂಗ್ ಹೇಳಿದ್ದಾರೆ.
ಶನಿವಾರ ದಿನಪೂರ್ತಿ ನಡೆದ ಸಿಡಬ್ಲುಸಿ ಸಭೆಯಲ್ಲಿ ಸೋನಿಯಾ ಗಾಂಧಿ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ರಾಹುಲ್ ಗಾಂಧಿ ರಾಜೀನಾಮೆಯನ್ನು ಹಿಂಪಡೆದು ಅಧ್ಯಕ್ಷರಾಗಿ ಮುಂದುವರಿಯಬೇಕೆಂದು ಪಕ್ಷದ ಕೆಲವು ಮುಖಂಡರು ಮಾಡಿದ್ದ ಮನವಿಯನ್ನು ರಾಹುಲ್ ತಿರಸ್ಕರಿಸಿದ್ದರು.
ಪಟಿಯಾಲಾ ಸಂಸದೆ ಪ್ರಿನೀತ್ ಕೌರ್, ಸಂಸದ ಮನೀಶ್ ತಿವಾರಿ ಅವರು ಸೋನಿಯಾ ಗಾಂಧಿ ಅವರ ಆಯ್ಕೆಯನ್ನು ಸ್ವಾಗತಿಸಿದರು.
Next Story