2 ಬೇಯಿಸಿದ ಮೊಟ್ಟೆಗಳಿಗೆ 1,700 ರೂ. ಹಣ ಪಡೆದ ಹೊಟೇಲ್ !
ದುಬಾರಿ ಬಿಲ್ ನ ಫೋಟೊ ವೈರಲ್
ಹೊಸದಿಲ್ಲಿ, ಆ.11: ಇತ್ತೀಚೆಗಷ್ಟೇ ಚಂಢೀಗಡದ ಹೊಟೇಲೊಂದು 2 ಬಾಳೆಹಣ್ಣುಗಳಿಗೆ 442 ರೂ. ಪಡೆದ ಸುದ್ದಿಯೊಂದು ಭಾರೀ ವಿವಾದ ಸೃಷ್ಟಿಸಿತ್ತು. ಇದೀಗ ಇದೇ ರೀತಿಯ ಮತ್ತೊಂದು ಘಟನೆಯಲ್ಲಿ 2 ಬೇಯಿಸಿದ ಮೊಟ್ಟೆಗಳಿಗೆ 1,700 ರೂ. ವಿಧಿಸಲಾಗಿದೆ.
ಮುಂಬೈನ ಹೊಟೇಲೊಂದರಲ್ಲಿ ಈ ಘಟನೆ ನಡೆದಿದೆ. ಇತ್ತೀಚೆಗಷ್ಟೇ ನಟ ರಾಹುಲ್ ಬೋಸ್ ಹೊಟೇಲೊಂದು ಬಾಳೆಹಣ್ಣುಗಳಿಗೆ 442 ರೂ. ಪಡೆದ ಬಗ್ಗೆ ಟ್ವೀಟ್ ಮಾಡಿದ್ದರು. ನಂತರ ಈ ವಿಚಾರ ಭಾರೀ ವಿವಾದ ಸೃಷ್ಟಿಸಿ, ಚಂಡೀಗಢದ ಅಬಕಾರಿ ಮತ್ತು ತೆರಿಗೆ ಇಲಾಖೆ ಹೊಟೇಲ್ ಗೆ 25 ಸಾವಿರ ರೂ. ದಂಡ ವಿಧಿಸಿತ್ತು.
ಇಂದು ಟ್ವಿಟರ್ ಬಳಕೆದಾರ ಕಾರ್ತಿಕ್ ಧರ್ ಎಂಬವರು ಟ್ವೀಟ್ ಒಂದನ್ನು ಮಾಡಿದ್ದು, 2 ಮೊಟ್ಟೆಗಳಿಗೆ 1700 ರೂ. ವಿಧಿಸಿರುವ ಬಗ್ಗೆ ಮಾಹಿತಿ ನೀಡಿದ್ದರು. ಈ ಟ್ವೀಟ್ ನಲ್ಲಿ ಕಾರ್ತಿಕ್ ಬಿಲ್ ನ ಫೋಟೊ ಪೋಸ್ಟ್ ಮಾಡಿದ್ದು, ಅದರಲ್ಲಿ 2 ಆಮ್ಲೆಟ್ ಗಳಿಗೆ 1700 ರೂ. ವಿಧಿಸಿರುವುದು ಕಾಣಿಸುತ್ತದೆ.
2 eggs for Rs 1700 at the @FourSeasons Mumbai. @RahulBose1 Bhai Aandolan karein? pic.twitter.com/hKCh0WwGcy
— Kartik Dhar (@KartikDhar) August 10, 2019