ಸ್ವಾತಂತ್ರ್ಯೋತ್ಸವ ಜಾಹೀರಾತು: ಮೋದಿ, ಶಾ ಫೋಟೊಗಳ ಜೊತೆ ಅತ್ಯಾಚಾರ, ಕೊಲೆ ಆರೋಪಿ ಸೇಂಗರ್ ಫೋಟೊ!
ಹೊಸದಿಲ್ಲಿ, ಆ.16: ಸ್ವಾತಂತ್ರ್ಯ ದಿನವಾದ ಆಗಸ್ಟ್ 15ರಂದು ದಿನಪತ್ರಿಕೆಯೊಂದರ ಮುಖಪುಟದ ಜಾಹೀರಾತೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ ಮತ್ತು ಇತರ ನಾಯಕರ ಫೋಟೊಗಳ ಜೊತೆ ಅತ್ಯಾಚಾರ ಮತ್ತು ಕೊಲೆ ಆರೋಪಿ, ಶಾಸಕ ಕುಲ್ ದೀಪ್ ಸಿಂಗ್ ಸೇಂಗರ್ ನ ಫೋಟೊ ಪ್ರಕಟಗೊಂಡಿದ್ದು, ವಿವಾದ ಸೃಷ್ಟಿಸಿದೆ.
ಹಿಂದಿ ದಿನಪತ್ರಿಕೆ 'ಹಿಂದೂಸ್ತಾನ್'ನಲ್ಲಿ ಈ ಜಾಹೀರಾತು ಪ್ರಕಟಗೊಂಡಿದ್ದು, ಸ್ಥಳೀಯ ಬಿಜೆಪಿ ನಾಯಕ ಮತ್ತು ಉಂಗು ನಗರ್ ಪಂಚಾಯತ್ ಚೇರ್ ಮೆನ್ ಅನೂಜ್ ಕುಮಾರ್ ದೀಕ್ಷಿತ್ ಜಾಹೀರಾತಿಗೆ ಹಣ ನೀಡಿದ್ದ ಎನ್ನಲಾಗಿದೆ. ಜಾಹೀರಾತಿನಲ್ಲಿ ಸೇಂಗರ್ ಜೊತೆಗೆ ಆತನ ಪತ್ನಿ ಸಂಗೀತಾರ ಫೊಟೊ ಕೂಡ ಇದೆ.
2017ರಲ್ಲಿ ಅಪ್ರಾಪ್ತೆಯೊಬ್ಬಳ ಅತ್ಯಾಚಾರಗೈದ ಮತ್ತು 2018ರಲ್ಲಿ ಆಕೆಯ ತಂದೆಯನ್ನು ಕೊಲೆಗೈದ ಆರೋಪಗಳು ಸೇಂಗರ್ ಮೇಲಿವೆ. ಆಗಸ್ಟ್ 1ರಂದು ಆತನನ್ನು ಬಿಜೆಪಿಯಿಂದ ಉಚ್ಛಾಟಿಸಲಾಗಿದೆ.
Next Story