ಯೋಗ, ಪ್ರಾಣಾಯಾಮ ಮತ್ತು ಆಯುರ್ವೇದ ನನ್ನನ್ನು ಮುನ್ನಡೆಸುತ್ತಿವೆ: ಪ್ರಧಾನಿ ಮೋದಿ
ಹೊಸದಿಲ್ಲಿ, ಆ.30: ಯೋಗ,ಪ್ರಾಣಾಯಾಮ ಮತ್ತು ಆಯುರ್ವೇದ ತನ್ನ ಫಿಟ್ನೆಸ್ನ ರಹಸ್ಯಗಳಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಇಲ್ಲಿ ಹೇಳಿದರು.
ರಾಜಕೀಯ ಜೀವನದಲ್ಲಿ ಹಲವಾರು ಆರೋಗ್ಯ ಸಂಬಂಧಿ ವೃತ್ತಿಪರ ತೊಡಕುಗಳಿವೆ,ಆದರೆ ನಿಸರ್ಗ ಚಿಕಿತ್ಸೆ ಮತ್ತು ಯೋಗದ ನೆರವಿನೊಂದಿಗೆ ಅವುಗಳನ್ನು ನಿವಾರಿಸಬಹುದಾಗಿದೆ ಎಂದು ಗುರುವಾರ ಫಿಟ್ ಇಂಡಿಯಾ ಆಂದೋಲನಕ್ಕೆ ಚಾಲನೆ ನೀಡಿದ್ದ ಮೋದಿ ತಿಳಿಸಿದರು.
ಆಯುಷ್ ಮತ್ತು ಯೋಗ ಕುರಿತು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು,ದೇಶಾದ್ಯಂತ 12,500 ಆಯುಷ್ ಕೇಂದ್ರಗಳನ್ನು ಸ್ಥಾಪಿಸುವ ಕೇಂದ್ರ ಸರಕಾರದ ಯೋಜನೆಯನ್ನು ಪ್ರಕಟಿಸಿದರು. ಇಂದು ಹರ್ಯಾಣದಲ್ಲಿ ಇಂತಹ 10 ಕೇಂದ್ರಗಳನ್ನು ಉದ್ಘಾಟಿಸಲಾಗಿದೆ ಎಂದರು.
ಆಯುಷ್ ಮತ್ತು ಯೋಗ ಫಿಟ್ ಇಂಡಿಯಾ ಆಂದೋಲನದ ಬಲವಾದ ಸ್ತಂಭಗಳಾಗಿವೆ ಎಂದ ಅವರು,ಇವು ನಮ್ಮ ಪದ್ಧತಿ,ಸಂಸ್ಕೃತಿ ಮತ್ತು ಸಂಪ್ರದಾಯ ಮಾತ್ರವಲ್ಲ,ಆರೋಗ್ಯರಕ್ಷಣೆ ಮೂಲಸೌಕರ್ಯದೊಂದಿಗೂ ಗುರುತಿಸಿಕೊಂಡಿವೆ ಎಂದರು.
Next Story