ಮಿರರ್ ನೌ ಚಾನಲ್ ಗೆ ಫೇ ಡಿಸೋಜ ರಾಜೀನಾಮೆ
ಮುಂಬೈ, ಸೆ. 9 : ಮಂಗಳೂರು ಮೂಲದ ಖ್ಯಾತ ಪತ್ರಕರ್ತೆ, ಮಿರರ್ ನೌ ಟಿವಿ ವಾಹಿನಿಯ ಕಾರ್ಯನಿರ್ವಾಹಕ ಸಂಪಾದಕಿ ಫೇ ಡಿಸೋಜ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ವಿನಯ್ ತಿವಾರಿ ಅವರು ಮಿರರ್ ನೌ ವ್ಯವಸ್ಥಾಪಕ ಸಂಪಾದಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಟೈಮ್ಸ್ ಬಳಗದ ಮಿರರ್ ನೌ ಟಿವಿ ಚಾನಲ್ ಅದೇ ಬಳಗದ ಟೈಮ್ಸ್ ನೌ ಗಿಂತ ಸಂಪೂರ್ಣ ಭಿನ್ನ ಎಂದು ಹೆಸರು ಗಳಿಸಿತ್ತು. 2017 ರಲ್ಲಿ ಮಿರರ್ ನೌ ಎಂಬ ಹೊಸ ಹೆಸರಿನೊಂದಿಗೆ ಫೇ ಡಿಸೋಜ ನೇತೃತ್ವದಲ್ಲಿ ಬಂದ ಈ ಚಾನಲ್ ನಲ್ಲಿ ವಸ್ತುನಿಷ್ಠವಾಗಿ ವರದಿ ಹಾಗು ಕಾರ್ಯಕ್ರಮಗಳು ಬರುತ್ತವೆ ಎಂದು ಜನಮನ್ನಣೆ ಗಳಿಸಿತ್ತು.
ಫೇ ಡಿಸೋಜ ಅವರ ಕಾರ್ಯಕ್ರಮ ಅರ್ಬನ್ ಡಿಬೇಟ್ ಕೂಡ ಮುಲಾಜಿಲ್ಲದೆ ಪ್ರಶ್ನೆ ಕೇಳುವ, ಜನಪರ ಕಾರ್ಯಕ್ರಮ ಎಂದೇ ಖ್ಯಾತಿ ಗಳಿಸಿತ್ತು. ಅದಕ್ಕಾಗಿ ಆಳುವ ಪಕ್ಷದ ಬೆಂಬಲಿಗರ ಕೆಂಗಣ್ಣಿಗೂ ಗುರಿಯಾಗಿತ್ತು.
@fayedsouza A voice of real #India can't ghost out of sheer pressure or whatever.
— Nishit Salian (@nissh18) September 9, 2019
Where as a country are we headed to? #fayedsouza #mirrornow @MirrorNow #journalists #media #bbc https://t.co/Sga8LWEouP