ಕಾಂಗ್ರೆಸ್ ಕೈತಪ್ಪಿದ ಸಂಸತ್ತಿನ ಎರಡು ಸ್ಥಾಯೀ ಸಮಿತಿ ಅಧ್ಯಕ್ಷತೆ
ಹೊಸದಿಲ್ಲಿ, ಸೆ.14: ಸಂಸತ್ತಿನ ಆರ್ಥಿಕ ಮತ್ತು ವಿದೇಶ ವ್ಯವಹಾರ ಸ್ಥಾಯೀ ಸಮಿತಿಯ ಅಧ್ಯಕ್ಷತೆ ವಿಪಕ್ಷಗಳ ಕೈತಪ್ಪಿದ್ದು ಆಡಳಿತಾರೂಢ ಬಿಜೆಪಿಯ ಮುಖಂಡರ ಪಾಲಾಗಿದೆ.
ಬಿಜೆಪಿ ಸಂಸದ ಜಯಂತ್ ಶಾ ಆರ್ಥಿಕ ಸ್ಥಾಯೀ ಸಮಿತಿಯ ಅಧ್ಯಕ್ಷರಾಗಿ ಮತ್ತು ಪಿಪಿ ಚೌಧರಿ ವಿದೇಶ ವ್ಯವಹಾರ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಕಳೆದ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ಎಂ ವೀರಪ್ಪ ಮೊಯ್ಲಿ ಆರ್ಥಿಕ ಸ್ಥಾಯೀಸಮಿತಿಯ ಅಧ್ಯಕ್ಷರಾಗಿದ್ದರೆ ಮತ್ತೊಬ್ಬ ಕಾಂಗ್ರೆಸ್ ಸಂಸದ ಶಶಿ ಥರೂರ್ ವಿದೇಶ ವ್ಯವಹಾರ ಸ್ಥಾಯೀ ಸಮಿತಿಯ ಅಧ್ಯಕ್ಷರಾಗಿದ್ದರು. ಮೊಯ್ಲಿ ಈ ಬಾರಿಯ ಚುನಾವಣೆಯಲ್ಲಿ ಸೋಲುಂಡಿದ್ದಾರೆ.
ಕಾಂಗ್ರೆಸ್ನ ಆನಂದ್ ಶರ್ಮ ಗೃಹ ವ್ಯವಹಾರಗಳ ಸಮಿತಿಯ ಅಧ್ಯಕ್ಷರಾಗಿದ್ದರೆ ಶಶಿ ಥರೂರ್ ಮಾಹಿತಿ ತಂತ್ರಜ್ಞಾನ ಸಮಿತಿಯ ಅಧ್ಯಕ್ಷರಾಗಿದ್ದಾರೆ. ರಾಹುಲ್ ಗಾಂಧಿಯವರನ್ನು ವಿದೇಶ ವ್ಯವಹಾರ ಸಮಿತಿಯಿಂದ ಗೃಹ ವ್ಯವಹಾರ ಸಮಿತಿಗೆ ವರ್ಗಾಯಿಸಲಾಗಿದೆ.
Next Story