ಪ್ರಧಾನಿ ಮೋದಿಯ ಸಹೋದರನ ಪುತ್ರಿಯ ಪರ್ಸ್ ಕಳವು: ಓರ್ವನ ಬಂಧನ
ಹೊಸದಿಲ್ಲಿ, ಅ.13: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ಅವರ ಪುತ್ರಿ ದಮಯಂತಿ ಮೋದಿ ಅವರ ಪರ್ಸ್ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸರು ರವಿವಾರ ಓರ್ವ ಕಳ್ಳನನ್ನು ಬಂಧಿಸಿದ್ದಾರೆ.ಇನ್ನೊಬ್ಬನ ಸೆರೆಗೆ ಬಲೆ ಬೀಸಿದ್ದಾರೆ.
ದಿಲ್ಲಿ ಜಂಕ್ಷನ್ ರೈಲ್ವೆ ನಿಲ್ದಾಣದಿಂದ ಸಿವಿಲ್ ಲೈನ್ಸ್ನಲ್ಲಿರುವ ಗುಜರಾತಿ ಸಮಾಜ ಭವನದ ಎದುರು ದಮಯಂತಿ ಮೋದಿ ರಿಕ್ಷಾದಿಂದ ಇಳಿದು ಒಳಗೆ ಹೋಗುತ್ತಿದ್ದಾಗ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಪರ್ಸ್ ಅನ್ನು ಕಿತ್ತೊಯ್ದ ಘಟನೆ ಶನಿವಾರ ಸಂಜೆ 7ರ ಸುಮಾರಿಗೆ ನಡೆದಿತ್ತು.
ಪರ್ಸ್ ನಲ್ಲಿ ಎರಡು ಮೊಬೈಲ್ ಫೋನ್ಗಳು, 60,000 ರೂ. ನಗದು, ಕುಟುಂಬ ಸದಸ್ಯರ ಆಧಾರ್ ಕಾರ್ಡ್ಗಳು ಹಾಗೂ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ಗಳು ಇದ್ದವು.
ಓರ್ವ ದುಷ್ಕರ್ಮಿಯ ಬಂಧನವನ್ನು ದೃಢಪಡಿಸಿದ ದಿಲ್ಲಿ ಪೊಲೀಸ್ ಆಯುಕ್ತರು, ‘‘ಪರ್ಸ್ ಕದ್ದಿರುವ ಸೋನಿ ಎಂಬಾತನನ್ನು ಸೋನಿಪತ್ನ ಹಳ್ಳಿಯೊಂದರಲ್ಲಿ ಬಂಧಿಸಲಾಗಿದೆ. ಹಲವು ದಾಖಲೆಗಳು ಹಾಗೂ ನಗದನ್ನು ಜಪ್ತಿ ಮಾಡಲಾಗಿದೆ’’ ಎಂದರು.
Next Story