ನಿಯಮಿತ ತಪಾಸಣೆಗೆ ನಾನಾವತಿ ಆಸ್ಪತ್ರೆ ದಾಖಲಾದ ಅಮಿತಾಭ್ ಬಚ್ಚನ್
ಹೊಸದಿಲ್ಲಿ, ಅ.18: ಬಾಲಿವುಡ್ ನಟ ಅಮಿತಾಭ್ ಬಚ್ಚನ್ ನಿಯಮಿತ ತಪಾಸಣೆಗೆ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
72ರ ವಯಸ್ಸಿನ ಬಚ್ಚನ್ ಮಂಗಳವಾರ ಆಸ್ಪತ್ರೆಗೆ ದಾಖಲಾಗಿದ್ದು, ಈಗಲೂ ವೈದ್ಯರ ನಿಗಾದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಚ್ಚನ್ ಅವರು ನಿಯಮಿತ ತಪಾಸಣೆಗಾಗಿ ಆಸ್ಪತ್ರೆಗೆ ಬಂದಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಪಿಟಿಐಗೆ ತಿಳಿಸಿವೆ.
ಬಚ್ಚನ್ ಲಿವರ್ಗೆ ಸಂಬಂಧಿಸಿದ ಸಮಸ್ಯೆಗೆ ಆಸ್ಪತ್ರೆ ದಾಖಲಾಗಿದ್ದಾರೆ ಎಂದು ಕೆಲವು ಆರಂಭಿಕ ವರದಿಗಳು ತಿಳಿಸಿದ್ದವು.
ತನ್ನ ಯಕೃತ್ತಿನ ಶೇ.25ರಷ್ಟು ಮಾತ್ರ ಕಾರ್ಯನಿರ್ವಹಿಸುತ್ತಿದ್ದರೆ, ಉಳಿದವು 20 ವರ್ಷಗಳ ಹಿಂದೆೆ ಕೆಟ್ಟ ರಕ್ತ ವರ್ಗಾವಣೆ ನಂತರ ಹಾನಿಗೊಳಗಾಗಿವೆ ಎಂದು ಅಮಿತಾಭ್ ಬಚ್ಚನ್ ಬಹಿರಂಗಪಡಿಸಿದ್ದರು. 1983ರಲ್ಲಿ ‘ಕೂಲಿ’ ಚಿತ್ರದ ಶೂಟಿಂಗ್ ವೇಳೆ ಗಂಭೀರ ಗಾಯಗೊಂಡ ಬಳಿಕ ಬಚ್ಚನ್ಗೆ ಕೆಟ್ಟ ರಕ್ತ ವರ್ಗಾವಣೆಯ ಅಗತ್ಯ ಎದುರಾಗಿತ್ತು.
ಆರಂಭಿಕ ರೋಗ ನಿರ್ಣಯ ಹಾಗೂ ನಿಯಮಿತ ತಪಾಸಣೆಯು ತನ್ನ ಆರೋಗ್ಯ ಕಾಪಾಡಲು ನೆರವಾಗಿದೆ ಎಂದು ಎನ್ಡಿಟಿವಿಯ ಸ್ವಸ್ಥಗೃಹ ಕಾರ್ಯಕ್ರಮದಲ್ಲಿ ಬಚ್ಚನ್ ಹೇಳಿದ್ದರು.