ಎಲ್ ಪಿಜಿ, ರೈಲು ಪ್ರಯಾಣ ದರ ಹೆಚ್ಚಿಸಿ ಕೇಂದ್ರದಿಂದ ಜನರಿಗೆ ಹೊಸವರ್ಷದ ಉಡುಗೊರೆ: ಸಿಪಿಎಂ
ಫೈಲ್ ಚಿತ್ರ
ಹೊಸದಿಲ್ಲಿ,ಜ.1: ರೈಲ್ವೆ ಪ್ರಯಾಣದರ ಮತ್ತು ಅಡಿಗೆ ಅನಿಲ ಸಿಲಿಂಡರ್ ಬೆಲೆಗಳನ್ನು ಹೆಚ್ಚಿಸುವ ಮೂಲಕ ಸರಕಾರವು ಜನರಿಗೆ ಹೊಸವರ್ಷದ ಉಡುಗೊರೆಯನ್ನು ನೀಡಿದೆ ಎಂದು ಸಿಪಿಎಂ ಟೀಕಿಸಿದೆ.
ಮಂಗಳವಾರ ರೈಲ್ವೆ ಪ್ರಯಾಣದರವನ್ನು ದರ್ಜೆಗಳನ್ನು ಅವಲಂಬಿಸಿ ಪ್ರತಿ ಕಿ.ಮೀ.ಗೆ ಒಂದರಿಂದ ನಾಲ್ಕು ಪೈಸೆಗಳಷ್ಟು ಹೆಚ್ಚಿಸಿದ್ದ ಸರಕಾರವು ಬುಧವಾರದಿಂದ ಸಬ್ಸಿಡಿರಹಿತ ಸಿಲಿಂಡರ್ನ್ನೂ 19 ರೂ.ಗಳಷ್ಟು ದುಬಾರಿಯಾಗಿಸಿದೆ.
‘ಮೋದಿ ಸರಕಾರವು ಹೊಸವರ್ಷವನ್ನು ಆರಂಭಿಸಿದೆ. ರೈಲ್ವೆ ಪ್ರಯಾಣದರಗಳ ಏರಿಕೆಯ ಬಳಿಕ ಎಲ್ಪಿಜಿ ಬೆಲೆಯೇರಿಕೆಯ ರೂಪದಲ್ಲಿ ಜನರ ಬದುಕುಗಳ ಮೇಲೆ ಇನ್ನೊಂದು ದಾಳಿ ನಡೆದಿದೆ. ತೀವ್ರ ಉದ್ಯೋಗ ನಷ್ಟ,ಆಹಾರ ಬೆಲೆ ಹಣದುಬ್ಬರ ಮತ್ತು ಗ್ರಾಮೀಣ ಆದಾಯದಲ್ಲಿ ದಾಖಲೆಯ ಕುಸಿತದಿಂದ ಜನ ಕಂಗೆಟ್ಟಿರುವಾಗಲೇ ಈ ಬೆಲೆಯೇರಿಕೆಗಳು ನಡೆದಿವೆ. ಇದು ಮೋದಿ ಸರಕಾರದ ಹೊಸವರ್ಷದ ಉಡುಗೊರೆಯಾಗಿದೆ ’ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಅವರು ಬುಧವಾರ ಟ್ವೀಟಿಸಿದ್ದಾರೆ.
Next Story