‘ತಾನಾಜಿ’ ಚಿತ್ರದಲ್ಲಿ ಚರಿತ್ರೆಯ ತಪ್ಪು ನಿರೂಪಣೆ: ನಟ ಸೈಫ್ ಅಲಿ ಖಾನ್
ಮುಂಬೈ, ಜ. 19: ‘ತಾನಾಜಿ’ ಚಿತ್ರದಲ್ಲಿ ಚರಿತ್ರೆಯ ತಪ್ಪು ನಿರೂಪಣೆ ಬಗ್ಗೆ ತನಗೆ ತಿಳಿದಿತ್ತು ಎಂದು ಬಾಲಿವುಡ್ ನಟ ಸೈಫ್ ಅಲಿಖಾನ್ ಹೇಳಿದ್ದಾರೆ. ‘ಫಿಲ್ಮ್ ಕಂಪ್ಯಾನಿಯನ್’ ಇತ್ತೀಚೆಗೆ ನಡೆಸಿದ ಮಾತುಕತೆ ಸಂದರ್ಭ ಸೈಫ್ ಅಲಿಖಾನ್, ಜನಪ್ರಿಯ ಹಾಗೂ ತಪ್ಪಾದ ಐತಿಹಾಸಿಕ ನಿರೂಪಣೆಯೇ ಈ ಚಿತ್ರದ ವಾಣಿಜ್ಯ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದಿದ್ದಾರೆ.
ದೇಶದಲ್ಲಿ ಸಾಂಸ್ಕೃತಿಕ ಧ್ವನಿ ಎತ್ತುವ ಬುದ್ಧಿಜೀವಿಗಳು ಇರುವ ಹೊರತಾಗಿಯೂ ಮುಖ್ಯವಾಹಿನಿಯ ಚಿತ್ರೋದ್ಯಮ ಜನಪ್ರಿಯ ವಿಧಾನವನ್ನು ಅನುಸರಿಸುತ್ತಿರುವುದು ದುರಾದೃಷ್ಟಕರ ಎಂದು ಅವರು ಹೇಳಿದರು. ಚಾರಿತ್ರಿಕ ನಿರೂಪಣೆಗಳು ಧ್ರುವೀಕರಣಗೊಳ್ಳುತ್ತಿರುವ ಬಗ್ಗೆ ಆಳವಾಗಿ ಕೆದಕಿದ ಸೈಫ್, 1947ರಲ್ಲಿ ಪಾಕಿಸ್ತಾನದ ಹುಟ್ಟಿನೊಂದಿಗೆ ಇದು ಆರಂಭವಾಗಿದೆ. ವಿಭಜನೆಯ ಸಂದರ್ಭ ಭಾರತದಲ್ಲಿಯೇ ಇದ್ದ ನನ್ನ ಪೂರ್ವಜರು ಇದೊಂದು ಜಾತ್ಯತೀತ ರಾಷ್ಟ್ರ ಎಂದು ನಂಬಿದ್ದರು ಎಂದರು.
Next Story