ಆಧಾರ್ನೊಂದಿಗೆ ಜೋಡಿಸದೇ ಇದ್ದರೆ ಮಾರ್ಚ್ 31ರ ಬಳಿಕ ಪಾನ್ ನಿಷ್ಕ್ರಿಯ
ಹೊಸದಿಲ್ಲಿ, ಫೆ. 15: 2020 ಮಾರ್ಚ್ 31ರ ಒಳಗೆ ಆಧಾರ್ ಕಾರ್ಡ್ನೊಂದಿಗೆ ಜೋಡಿಸದೇ ಇದ್ದರೆ, ಪಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಆದಾಯ ತೆರಿಗೆ ಪಾವತಿದಾರರು ಪ್ಯಾನ್ಗೆ ಆಧಾರ್ ಕಾರ್ಡ್ ಜೋಡಿಸುವುದು ಆದಾಯ ತೆರಿಗೆ ಕಾಯ್ದೆ ಪ್ರಕಾರ ಕಡ್ಡಾಯವಾಗಿದೆ. ಪಾನ್-ಆಧಾರ್ ಕಾರ್ಡ್ ಜೋಡಣೆಯ ಅಂತಿಮ ಗಡುವನ್ನು 8 ಬಾರಿ ವಿಸ್ತರಿಸಲಾಗಿತ್ತು. ಈ ಹಿಂದಿನ ಅಂತಿಮ ಗಡು 2019 ಡಿಸೆಂಬರ್ 31 ಆಗಿತ್ತು.
Next Story