ಮತ್ತಿಬ್ಬರು ಭಾರತೀಯರಿಗೆ ಕೊರೋನ ಸೋಂಕು
ಹೊಸದಿಲ್ಲಿ, ಫೆ.17: ಜಪಾನ್ನ ಯೊಕೊಹಮಾದಲ್ಲಿ ಎರಡು ವಾರಗಳಿಂದ ನಿರ್ಬಂಧಿಸಲ್ಪಟ್ಟಿರುವ ಹಡಗಿನಲ್ಲಿರುವ ಮತ್ತಿಬ್ಬರು ಭಾರತೀಯರಿಗೆ ಕೊರೋನ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಹಡಗಿನಲ್ಲಿರುವ ಐದು ಮಂದಿಗೆ ವೈರಸ್ ಸೋಂಕು ದೃಢಪಟ್ಟಿದೆ.
"ಮತ್ತಿಬ್ಬರು ಭಾರತೀಯರಿಗೆ ಸಿಓವಿಐಡಿ-19 ವೈರಸ್ ಸೋಂಕು ತಗುಲಿರುವುದು ತಪಾಸಣೆಯಿಂದ ದೃಢಪಟ್ಟಿದೆ. ನಿರ್ಬಂಧಿಸಲಾಗಿರುವ ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿರುವ 137 ಮಂದಿಗೆ ಸೋಂಕು ತಗುಲಿರುವುದು ಹೊಸದಾಗಿ ಬೆಳಕಿಗೆ ಬಂದಿದೆ. ಇಬ್ಬರೂ ಭಾರತೀಯರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ" ಎಂದು ಜಪಾನ್ನಲ್ಲಿರುವ ಭಾರತೀಯ ದೂತಾವಾಸದ ಪ್ರಕಟನೆ ಹೇಳಿದೆ.
ಹಡಗಿನಲ್ಲಿರುವವರ ಪೈಕಿ ಒಟ್ಟು 355 ಮಂದಿಗೆ ಕೊರೋನ ವೈರಸ್ ದೃಢಪಟ್ಟಿ.
Next Story