ಏಶ್ಯನ್ ಕುಸ್ತಿ ಚಾಂಪಿಯನ್ಶಿಪ್: ಜಿತೇಂದರ್ ಕುಮಾರ್ಗೆ ಬೆಳ್ಳಿ
ಹೊಸದಿಲ್ಲಿ, ಫೆ.23: ಭಾರತದ ಜಿತೇಂದರ್ ಕುಮಾರ್ ಏಶ್ಯನ್ ಕುಸ್ತಿ ಚಾಂಪಿಯನ್ಶಿಪ್ನ ಫೈನಲ್ನಲ್ಲಿ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಪುರುಷರ 74 ಕೆ.ಜಿ. ವಿಭಾಗದ ಫೈನಲ್ನಲ್ಲಿ ಹಾಲಿ ಚಾಂಪಿಯನ್ ಡೇನಿಯಾರ್ ಕೈಸಾನೋನ್ ಅವರ ವಿರುದ್ಧ 1-3 ಅಂತರದಲ್ಲಿ ಸೋಲು ಅನುಭವಿಸಿ ಎರಡನೇ ಸ್ಥಾನ ಪಡೆದರು. ರವಿವಾರ ನಡೆದ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಸಾಧನೆಯೊಂದಿಗೆ ಒಲಿಂಪಿಕ್ಸ್ ಕ್ವಾಲಿಫೈಯರ್ನಲ್ಲಿ ಭಾರತದ ಇತರ ಕುಸ್ತಿಪಟುಗಳಿಂದ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
Next Story