ಕೊರೋನ ಸೋಂಕು ಪರೀಕ್ಷೆ ಪ್ರಮಾಣವನ್ನು ಸರಕಾರ ಹೆಚ್ಚಿಸಬೇಕು: ಪ್ರಿಯಾಂಕಾ
ಹೊಸದಿಲ್ಲಿ,ಎ.4:ಕೊರೋನ ವೈರಸ್ ಸೋಂಕು ಪರೀಕ್ಷೆಯ ಪ್ರಮಾಣವನ್ನು ದೇಶದಲ್ಲಿ ತಕ್ಷಣವೇ ಹೆಚ್ಚಿಸಬೇಕೆಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಒತ್ತಾಯಿಸಿದರು.
ಸೋಂಕಿನ ತೀವ್ರತೆ ಹಾಗೂ ಅದು ಆವರಿಸುತ್ತಿರುವ ರೀತಿಯ ಬಗ್ಗೆ ಅತ್ಯಮೂಲ್ಯ ಮಾಹಿತಿಯನ್ನು ಪರೀಕ್ಷೆಗಳಿಂದ ಪಡೆಯಬಹುದು ಎಂದು ಗಾಂಧಿ ಪ್ರತಿಪಾದಿಸಿದರು.
ಭಾರತವು ಕೊರೋನ ಸೋಂಕಿನ ಪರೀಕ್ಷಾ ಪ್ರಮಾಣವನು ತಕ್ಷಣವೇ ಹೆಚ್ಚಿಸುವುದು ಅನಿವಾರ್ಯ.ಸೋಂಕು ಹರಡುವಿಕೆಗೆ, ಹರಡುವಿಕೆಯ ವಿಧಾನ ಹಾಗೂ ಅದರ ಮೂಲಗಳ ಪರೀಕ್ಷೆಗಳ ಮೂಲಕ ತಿಳಿದುಕೊಳ್ಳಬೇಕಿದೆ ಎಂದು ಪ್ರಿಯಾಂಕಾ ಟ್ವೀಟ್ ಮಾಡಿದರು.
ವೈದ್ಯಕೀಯ ಸಿಬ್ಬಂದಿಗೆ ರಕ್ಷಣಾ ಸಾಧನ ಸಿಗುತ್ತಿಲ್ಲ.ಅವರ ಸಂಬಳವನ್ನು ಕಡಿತಗೊಳಿಸಲಾಗುತ್ತಿದೆ ಎಂದು ಆರೋಪಿಸಿದ ಪ್ರಿಯಾಂಕಾ,ಇಂತಹ ಸಮಯದಲ್ಲಿ ಎಲ್ಲ ಸಹಕಾರ ನೀಡಬೇಕೆಂದು ಸರಕಾರವನ್ನು ಆಗ್ರಹಿಸಿದರು.
Next Story