ಕೊರೋನ ಸೋಂಕಿನಿಂದ ಗುಣಮುಖರಾದ 94 ವರ್ಷದ ವೃದ್ಧ
ಲಕ್ನೋ, ಜೂ.8: ಉತ್ತರಪ್ರದೇಶದ ಗೌತಮ್ಬುದ್ಧ ನಗರದಲ್ಲಿ 94 ವರ್ಷದ ವೃದ್ಧರೊಬ್ಬರು ಕೊರೋನ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.
ನೋಯ್ಡಾದ ಶಾರದಾ ಆಸ್ಪತ್ರೆಗೆ ದಾಖಲಿಸಲಾಗಿದ್ದ ಕೊರೋನ ಸೋಂಕಿತರಲ್ಲಿ 10 ವ್ಯಕ್ತಿಗಳು ಗುಣಮುಖರಾದ ಹಿನ್ನೆಲೆಯಲ್ಲಿ ಅವರನ್ನು ರವಿವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇವರಲ್ಲಿ 94 ವರ್ಷದ ವ್ಯಕ್ತಿಯೂ ಸೇರಿದ್ದಾರೆ.
ಗ್ರೇಟರ್ ನೋಯ್ಡಾದ ಕೈಲಾಶ್ ಆಸ್ಪತ್ರೆ ಮತ್ತು ಸರಕಾರಿ ವೈದ್ಯವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 42 ಕೊರೋನ ಸೋಂಕಿತರೂ ಗುಣಮುಖರಾಗಿದ್ದಾರೆ. ಇದರೊಂದಿಗೆ ರವಿವಾರ ಒಟ್ಟು 57 ಕೊರೋನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ತೆರಳಿದ್ದು, ಜಿಲ್ಲೆಯಲ್ಲಿ ಗುಣಮುಖರಾಗುವ ಪ್ರಮಾಣ 65%ಕ್ಕೇರಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Next Story