ಯುನಿಟೆಕ್ ಪ್ರೊಮೋಟರ್ ಸಂಜಯ್ ಚಂದ್ರಗೆ ಜಾಮೀನು
ಹೊಸದಿಲ್ಲಿ,ಜು.7: ಜೈಲುಪಾಲಾಗಿರುವ ರಿಯಲ್ ಎಸ್ಟೇಟ್ ಕಂಪೆನಿ ಯುನಿಟೆಕ್ ಪೊಮೋಟರ್ ಸಂಜಯ್ ಚಂದ್ರಗೆ ಸುಪ್ರೀಂಕೋರ್ಟ್ ಇಂದು ಜಾಮೀನು ಮಂಜೂರು ಮಾಡಿದೆ.ಚಂದ್ರ ಅವರ ತಂದೆ-ತಾಯಿ ಅನಾರೋಗ್ಯ ಪೀಡಿತರಾಗಿರುವ ಕಾರಣ ನ್ಯಾಯಾಲಯ ಜಾಮೀನು ನೀಡಿದೆ.
ಗುರುಗ್ರಾಮದಲ್ಲಿ ಎರಡು ವಸತಿ ಯೋಜನೆಗಳ ಮೂಲಕ ಮನೆ ಖರೀದಿದಾರರನ್ನು ವಂಚಿಸಿದ ಆರೋಪದ ಮೇಲೆ ಯುನಿಟೆಕ್ ಪ್ರವರ್ತಕ ಸಂಜಯ್ ಚಂದ್ರ ತನ್ನಸಹೋದರ ಅಜಯ್ ಚಂದ್ರ ಜೊತೆಗೆ ಕಳೆದ ಮೂರು ವರ್ಷಗಳಿಂದ ಜೈಲಿನಲ್ಲಿದ್ದಾನೆ.
ಸಂಜಯ್ ಹೆತ್ತವರು ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಚ್ಛ ನ್ಯಾಯಾಲಯವು ಇಂದು ಸಂಜಯ್ ಚಂದ್ರನಿಗೆ ಒಂದು ತಿಂಗಳ ಕಾಲ ಜಾಮೀನು ನೀಡಿದೆ. ಆದರೆ ಅಜಯ್ಗೆ ಜಾಮೀನು ನೀಡಲು ನಿರಾಕರಿಸಿದೆ.
ಸಂಜಯ್ ಅವರ 79ರ ವಯಸ್ಸಿನ ತಂದೆಗೆ ಕೋವಿಡ್-19 ಸೋಂಕು ತಗಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Next Story