ಗುಜರಾತ್ ನಲ್ಲಿ ಭೂಕಂಪ
ಅಹ್ಮದಾಬಾದ್, ಜು. 16: ಗುಜರಾತ್ ನ ಸೌರಾಷ್ಟ್ರ ವಲಯದ ರಾಜ್ಕೋಟ್ ನಗರದ ಸಮೀಪದ ಗ್ರಾಮೀಣ ಪ್ರದೇಶಗಳಲ್ಲಿ ಗುರುವಾರ ಬೆಳಗ್ಗೆ ಮಧ್ಯಮ ತೀವ್ರತೆಯ 4.8 ಪ್ರಮಾಣದ ಭೂಕಂಪ ಸಂಭವಿಸಿದೆ.
ಯಾವುದೇ ಪ್ರಾಣ ಅಥವಾ ಸೊತ್ತು ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ರಾಜ್ಕೋಟದ ಜಿಲ್ಲಾಧಿಕಾರಿ ರಮ್ಯಾ ಮೋಹನ್ ತಿಳಿಸಿದ್ದಾರೆ. ಶಾಪರ್ ಹಾಗೂ ತ್ರಾಂಬ ಗ್ರಾಮಗಳಿಗೆ ಸಮೀಪವಿರುವ ರಾಜ್ಕೋಟ್ ನಗರದ 20 ಕಿ.ಮೀ. ದಕ್ಷಿಣ ನೈಋತ್ಯದಲ್ಲಿ ಈ ಭೂಕಂಪ ಕೇಂದ್ರವನ್ನು ಹೊಂದಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.
‘‘ರಾಜ್ಕೋಟ್ ನಗರದ ಸಮೀಪ ಬೆಳಗ್ಗೆ 7.30ಕ್ಕೆ 4.8 ಪ್ರಮಾಣದ ಭೂಕಂಪ ಸಂಭವಿಸಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದಿಂದ ಬಂದ ವರದಿ ಪ್ರಕಾರ ಯಾವುದೇ ಹಾನಿ ಸಂಭವಿಸಿಲ್ಲ’’ ಎಂದು ರಮ್ಯಾ ಮೋಹನ್ ತಿಳಿಸಿದ್ದಾರೆ.
Next Story