ಉತ್ತರ ಪ್ರದೇಶ ಆರೋಗ್ಯ ಸಚಿವರಿಗೆ ಕೊರೋನ ಪಾಸಿಟಿವ್
ಹೊಸದಿಲ್ಲಿ: ಉತ್ತರ ಪ್ರದೇಶ ಆರೋಗ್ಯ ಸಚಿವ ಜೈ ಪ್ರತಾಪ್ ಸಿಂಗ್ ಅವರಿಗೆ ಕೊರೋನ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸಚಿವರು ಸ್ವತಃ ಹೋಮ್ ಕ್ವಾರಂಟೈನ್ ಗೊಳಗಾಗಿದ್ದಾರೆ.
ಸಚಿವರ ಕುಟುಂಬಸ್ಥರ ಸ್ಯಾಂಪಲ್ ಗಳನ್ನು ಆರೋಗ್ಯ ಕಾರ್ಯಕರ್ತರು ಪಡೆದುಕೊಂಡಿದ್ದು, ಶನಿವಾರ ವರದಿ ಸಿಗಲಿದೆ.
ಕೆಲ ದಿನಗಳಿಂದ ಜೈ ಪ್ರತಾಪ್ ಸಿಂಗ್ ಅಲ್ಪ ಜ್ವರದಿಂದ ಬಳಲುತ್ತಿದ್ದು, ಪರೀಕ್ಷೆಗೆ ಒಳಗಾಗಿದ್ದರು. ಇದೀಗ ಅವರಿಗೆ ಕೊರೋನ ಸೋಂಕು ತಗಲಿರುವುದು ದೃಢಪಟ್ಟಿದೆ.
Next Story