ಗಂಟಲ ದ್ರವದ ಬದಲು ಯೋನಿ ದ್ರವ ಪಡೆದ ಲ್ಯಾಬ್ ಟೆಕ್ನಿಶಿಯನ್: ಅತ್ಯಾಚಾರ ಪ್ರಕರಣ ದಾಖಲು
ಕೊರೋನ ಪರೀಕ್ಷೆಗೆ ಬಂದ ಯುವತಿ
ಮುಂಬೈ: ಕೋವಿಡ್ 19 ಪರೀಕ್ಷೆಗೆಂದು ಆಗಮಿಸಿದ ಯುವತಿಯ ಗಂಟಲು ದ್ರವ ಮಾದರಿ ಸಂಗ್ರಹಿಸುವ ಬದಲು ಯೋನಿ ದ್ರವ ಸಂಗ್ರಹಿಸಿದ ಲ್ಯಾಬ್ ಟೆಕ್ನಿಷಿಯನ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ.
ಸ್ಥಳೀಯ ಮಾಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ 24 ಹರೆಯದ ಯುವತಿಯ ಸಹೋದ್ಯೋಗಿಗೆ ಕೊರೋನ ಸೋಂಕು ದೃಢಪಟ್ಟ ನಂತರ ಯುವತಿ ತನ್ನ ಗಂಟಲು ದ್ರವ ಮಾದರಿ ಪರೀಕ್ಷೆಗೆಂದು ಲ್ಯಾಬ್ಗೆ ಬಂದಿದ್ದರು. ಆಗ ನಿಖರ ಫಲಿತಾಂಶಕ್ಕಾಗಿ ಯೋನಿ ದ್ರವ ಕೂಡ ಅಗತ್ಯ ಎಂದು ಆತ ಆಕೆಗೆ ತಿಳಿಸಿದ್ದ.
ಈ ಬಗ್ಗೆ ನಂತರ ಯುವತಿ ತನ್ನ ಸೋದರನಿಗೆ ಮಾಹಿತಿ ನೀಡಿದ್ದು, ಆತ ವೈದ್ಯರನ್ನು ಸಂಪರ್ಕಿಸಿದ ನಂತರ ಪೊಲೀಸ್ ದೂರು ನೀಡಲಾಗಿತ್ತು. ಅಮರಾವತಿಯ ಕೋವಿಡ್ ಟ್ರಾಮಾ ಸೆಂಟರ್ ಲ್ಯಾಬ್ನಲ್ಲಿ ಈ ಘಟನೆ ನಡೆದಿದೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಯಶೋಮತಿ ಠಾಕುರ್, ತಪ್ಪಿತಸ್ಥನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
Next Story