ಅಂತರ್ರಾಷ್ಟ್ರೀಯ ವಿಮಾನ ಹಾರಾಟದ ರದ್ಧತಿ ಆಗಸ್ಟ್ 31ರ ತನಕ ವಿಸ್ತರಣೆ
ಹೊಸದಿಲ್ಲಿ, ಜು.31: ಕೇಂದ್ರ ಸರಕಾರವು ನಿಗದಿತ ಅಂತರ್ರಾಷ್ಟ್ರೀಯ ವಿಮಾನ ಹಾರಾಟದ ರದ್ದತಿಯ ಅವಧಿಯನ್ನು ಆಗಸ್ಟ್ 31ರ ತನಕ ವಿಸ್ತರಿಸಿದೆ.
ಭಾರತವು ಅಮೆರಿಕ, ಜರ್ಮನಿ ಹಾಗೂ ಫ್ರಾನ್ಸ್ ದೇಶಗಳಿಗೆ ಪ್ರಯಾಣವನ್ನು ಆರಂಭಿಸಿದ ಬಳಿಕ ವಿಮಾನ ಹಾರಾಟ ಮತ್ತೆ ಆರಂಭವಾಗಬಹುದು.
ಸರಕಾರವು ಭಾರತದಿಂದ ನಿರ್ಗಮಿಸುವ, ಆಗಮಿಸುವ ನಿಗದಿತ ಅಂತರ್ರಾಷ್ಟ್ರೀಯ ಕಮರ್ಶಿಯಲ್ ಪ್ರಯಾಣಿಕರ ಸೇವೆಗಳನ್ನು ಆಗಸ್ಟ್ 31, ರಾತ್ರಿ 11:59ರ ತನಕ ರದ್ದುಪಡಿಸಿದೆ. ಅಂತರ್ರಾಷ್ಟ್ರೀಯ ಆಲ್-ಕಾರ್ಗೊ ಚಟುವಟಿಕೆಗಳು ಹಾಗೂ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದಿಂದ ವಿಶೇಷ ಮಾನ್ಯತೆ ಪಡೆದಿರುವ ವಿಮಾನಗಳಿಗೆ ನಿರ್ಬಂಧ ಅನ್ವಯವಾಗುವುದಿಲ್ಲ ಎಂದು ಡಿಜಿಸಿಎ ಶುಕ್ರವಾರ ಪ್ರಕಟನೆಯೊಂದರಲ್ಲಿ ತಿಳಿಸಿದೆ.
Next Story