ಕೊರೋನ ಸೋಂಕಿತ ಮಹಿಳೆಯ ಮೇಲೆ ಆ್ಯಂಬುಲೆನ್ಸ್ ಚಾಲಕನಿಂದ ಅತ್ಯಾಚಾರ
ಸಾಂದರ್ಭಿಕ ಚಿತ್ರ
ತಿರುವನಂತಪುರ: ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲೇ ಆ್ಯಂಬುಲೆನ್ಸ್ ಚಾಲಕ ಕೋವಿಡ್-19 ಪಾಸಿಟಿವ್ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ಕೇರಳದ ಪಟ್ಟಣಂತಿಟ್ಟ ಜಿಲ್ಲೆಯಿಂದ ವರದಿಯಾಗಿದೆ.
"ಆ್ಯಂಬುಲೆನ್ಸ್ ಚಾಲಕ ನೌಫಾಲ್ ನನ್ನು ಬಂಧಿಸಲಾಗಿದೆ" ಎಂದು ಪಟ್ಟಣಂತಿಟ್ಟ ಎಸ್ಪಿ ಕೆ.ಜಿ.ಸೈಮನ್ ಹೇಳಿದ್ದಾರೆ. ಜಿಲ್ಲೆಯವನಾದ ನೌಫಾಲ್, ರಾಜ್ಯ ಆರೋಗ್ಯ ಇಲಾಖೆಯ 108 ಆ್ಯಂಬುಲೆನ್ಸ್ ಸೇವೆಯಲ್ಲಿದ್ದ. 2019ರಲ್ಲಿ ಕೊಲೆಯತ್ನ ಆರೋಪವೂ ಈತನ ವಿರುದ್ಧ ದಾಖಲಾಗಿತ್ತು” ಎಂದು ಪೊಲೀಸರು ಹೇಳಿದ್ದಾರೆ.
ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ನಿರ್ಜನ ಮೈದಾನದಲ್ಲಿ ಆ್ಯಂಬುಲೆನ್ಸ್ ನಿಲ್ಲಿಸಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆಸ್ಪತ್ರೆಗೆ ತಲುಪಿದ ಬಳಿಕ ಮಹಿಳೆ ಈ ಘಟನೆಯನ್ನು ಆಸ್ಪತ್ರೆ ಸಿಬ್ಬಂದಿಗೆ ತಿಳಿಸಿದ್ದು, ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸಂತ್ರಸ್ತೆಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದು, ಕೋವಿಡ್-19 ಆಸ್ಪತ್ರೆಯಲ್ಲಿ ವಿಶೇಷ ಕೌನ್ಸಿಲಿಂಗ್ ನೀಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
Next Story