ಪತ್ನಿಯನ್ನು ಕೊಂದು ಸ್ವತಃ ಗುಂಡಿಕ್ಕಿ ಆತ್ಮಹತ್ಯೆಗೆ ಶರಣಾದ ಸಿಆರ್ಪಿಎಫ್ ಸಿಬ್ಬಂದಿ
ಜಮ್ಮು, ಸೆ.13: ಸಿಆರ್ಪಿಎಫ್ ಸಿಬ್ಬಂದಿಯೊಬ್ಬ ತನ್ನ ಪತ್ನಿಯನ್ನು ಸಾಯಿಸಿ, ಅತ್ತಿಗೆಯನ್ನು ಗಾಯಗೊಳಿಸಿದ ಬಳಿಕ ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಮ್ಮುವಿನಲ್ಲಿ ರವಿವಾರ ನಡೆದಿದೆ.
ಗುಂಡುಹಾರಿಸಿಕೊಂಡವನನ್ನು ಕಾನ್ಸ್ಟೇಬಲ್ ಮದನ್ ಸಿಂಗ್ ಚಿಬ್ ಎಂದು ಗುರುತಿಸಲಾಗಿದ್ದು, ಸೆಕ್ಟರ್ ಹೆಡ್ ಕ್ವಾರ್ಟರ್ನಲ್ಲಿ ಮೃತದೇಹವನ್ನು ಇಡಲಾಗಿದೆ.
ಕಾನ್ಸ್ಟೇಬಲ್ ಸ್ವತಃ ಗುಂಡಿಟ್ಟುಕೊಂಡು ಸಾಯುವ ಮೊದಲು ತನ್ನ ಪತ್ನಿ ಹಾಗೂ ಅತ್ತಿಗೆಯೊಂದಿಗೆ ಯಾವುದೋ ವಿಚಾರಕ್ಕೆ ಸಂಬಂಧಿಸಿ ವಾಗ್ವಾದ ನಡೆಸಿದ್ದರು. ಸಿಂಗ್ ಅವರ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಸಿಂಗ್ ಅವರ ಅತ್ತಿಗೆಗೆ ಗಾಯವಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.
Next Story