ಶಿಮ್ಲಾ ಬಳಿ ನದಿಗೆ ಬಸ್ ಉರುಳಿ 43 ಜನರ ಸಾವು
ಶಿಮ್ಲಾ,ಎ.19: ಶಿಮ್ಲಾ ಜಿಲ್ಲೆಯ ನೆರ್ವಾ ಪ್ರದೇಶದಲ್ಲಿ ಬುಧವಾರ ಬೆಳಿಗ್ಗೆ ಖಾಸಗಿ ಬಸ್ಸೊಂದು ಟೋಂಸ್ ನದಿಗೆ ಬಿದ್ದ ಪರಿಣಾಮ 43 ಪ್ರಯಾಣಿಕರು ಸಾವನ್ನಪ್ಪಿದ್ದಾರೆ.
ಉತ್ತರಾಖಂಡ್-ಹಿಮಾಚಲ ಗಡಿಯಲ್ಲಿ ಈ ಅಪಘಾತ ಸಂಭವಿಸಿದ್ದು, 56 ಪ್ರಯಾಣಿಕರನ್ನು ಹೊತ್ತಿದ್ದ ಬಸ್ ಉತ್ತರಾಖಂಡದ ವಿಕಾಸನಗರದಿಂದ ತ್ಯೂನಿಗೆ ಬರುತ್ತಿತ್ತು ಎಂದು ಜಿಲ್ಲಾಧಿಕಾರಿ ರೋಹನಚಂದ್ ಠಾಕೂರ್ ತಿಳಿಸಿದರು.
43 ಶವಗಳನ್ನು ನದಿಯಿಂದ ಹೊರತೆಗೆಯಲಾಗಿದ್ದು, ನಾಪತ್ತೆಯಾಗಿರುವ ಇತರ ಪ್ರಯಾಣಿಕರ ಶೋಧಕಾರ್ಯ ಮುಂದುವರಿದಿದೆ ಎಂದು ಎಸ್ಪಿ ಡಿ.ಡಬ್ಲು.ನೇಗಿ ತಿಳಿಸಿದರು.
Next Story