ಅಪ್ರಾಪ್ತ ಚಲಾಯಿಸುತ್ತಿದ್ದ ಕಾರು ಫುಟ್ಪಾತ್ ಮೇಲೇರಿ ಇಬ್ಬರು ಮೃತ್ಯು
ಹೊಸದಿಲ್ಲಿ, ಎ.20: ಫುಟ್ಪಾತ್ ನಲ್ಲಿ ಮಲಗಿದ್ದವರ ಮೇಲೆ ಕಾರೊಂದು ಹರಿದಿದ್ದು, 2 ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಇಲ್ಲಿನ ಕಶ್ಮೀರಿ ಗೇಟ್ ಬಳಿ ನಡೆದಿದೆ.
ಮುಂಜಾನೆ ಸುಮಾರು 5:45ರ ಸುಮಾರಿಗೆ ಘಟನೆ ಸಂಭವಿಸಿದ್ದು, ಅಪ್ರಾಪ್ತ ವಯಸ್ಕನೊಬ್ಬ ಕಾರು ಓಡಿಸುತ್ತಿದ್ದು, ನಿಯಂತ್ರಣ ತಪ್ಪಿ ಫುಟ್ಪಾತ್ ಮೇಲೆ ಕಾರು ಚಲಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಫುಟ್ಪಾತ್ ನ ಮೇಲೆ ಏರುವುದಕ್ಕೂ ಮೊದಲು ರಿಂಗ್ ರೋಡ್ ನಲ್ಲಿ ಕಾರು ಅಡ್ಡಾದಿಡ್ಡಿಯಾಗಿ ಚಲಿಸುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾರು ಓಡಿಸುತ್ತಿದ್ದಾತ ದಕ್ಷಿಣ ದಿಲ್ಲಿಯ ಪ್ರಖ್ಯಾತ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಎನ್ನುವುದು ವಿಚಾರಣೆಯ ವೇಳೆ ತಿಳಿದುಬಂದಿದೆ. ಘಟನೆಯ ಬಗ್ಗೆ ಆತನ ಕುಟುಂಬಸ್ಥರಿಗೆ ಮಾಹಿತಿ ನೀಡಿರುವ ಪೊಲೀಸರು ಕಾರನ್ನು ವಶಪಡಿಸಿಕೊಂಡಿದ್ದಾರೆ.
ಗಾಯಾಳುಗಳನ್ನು ಸುಶ್ರುತ ಟ್ರಾಮಾ ಸೆಂಟರ್ ಗೆ ದಾಖಲಿಸಲಾಗಿದ್ದು, ಮೃತಪಟ್ಟವರ ಗುರುತು ಇನ್ನೂ ಪತ್ತೆಯಾಗಿಲ್ಲ.
Next Story