ಕಚ್ಛಾ ಬಾಂಬ್ ಸ್ಫೋಟ: ಇಬ್ಬರು ಪೊಲೀಸರಿಗೆ ಗಾಯ
ಸಾಂದರ್ಭಿಕ ಚಿತ್ರ
ಬರೇಲಿ, ಮೇ 23: ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದ್ದ ಕಚ್ಛಾ ಬಾಂಬ್ ಸ್ಫೋಟಿಸಿ, ಬಾಂಬ್ ನಿಷ್ಕ್ರಿಯ ದಳದ ಇಬ್ಬರು ಪೊಲೀಸರು ಗಾಯಗೊಂಡ ಘಟನೆ ಫರೀದ್ಪುರ್ ಠಾಣೆಯಲ್ಲಿ ಸಂಭವಿಸಿದೆ.
ಜಿಲ್ಲೆಯಲ್ಲಿರುವ ಸಿಎಎಸ್ ಇಂಟರ್ಕಾಲೇಜಿನ ಸಿಬ್ಬಂದಿಗಳ ಕೋಣೆಯಿಂದ ಮೇ 19ರಂದು ಆರು ಕಚ್ಛಾ ಬಾಂಬ್ಗಳನ್ನು ವಶಪಡಿಸಿಕೊಂಡು ಠಾಣೆಯಲ್ಲಿ ಇರಿಸಲಾಗಿತ್ತು. ಈ ಬಾಂಬ್ಗಳ ಮಾದರಿಯನ್ನು ಪರಿಶೀಲಿಸುತ್ತಿದ್ದಾಗ ಬಾಂಬ್ ಸ್ಫೋಟಿಸಿದ್ದು ಕಾನ್ಸ್ಟೇಬಲ್ಗಳಾದ ಚಂದ್ರಪಾಲ್ ಮತ್ತು ಕುನ್ವರ್ಪಾಲ್ ಗಾಯಗೊಂಡರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Next Story