ಚಾಂಪಿಯನ್ ಪಾಕ್ ನಾಯಕ ಸರ್ಫರಾಝ್ ಮಾವರಿಂದ ಭಾರತದ ಗುಣಗಾನ
ಹೊಸದಿಲ್ಲಿ, ಜೂ.20: ಪಾಕ್ ಕ್ರಿಕೆಟ್ ತಂಡದ ನಾಯಕ ಸರ್ಫ್ರಾಝ್ ಅಹ್ಮದ್ ರ ಮಾವ ಉತ್ತರ ಪ್ರದೇಶದ ಎತವಾದ ನಿವಾಸಿಯಾಗಿರುವ ಮೆಹಬೂಬ್ ಹಸನ್ ಅವರು ಭಾರತ ತಂಡವು ಮತ್ತೊಮ್ಮೆ ಸಾಮರ್ಥ್ಯವನ್ನು ಪ್ರದರ್ಶಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರವಿವಾರ ನಡೆದ ಪಂದ್ಯದಲ್ಲಿ ತನ್ನ ಅಳಿಯನ ತಂಡದೆದುರು ಭಾರತ ಗೆಲ್ಲಲಿ ಎಂದು ನಾನು ಪ್ರಾರ್ಥಿಸುತ್ತಿದ್ದೆ. ಸೋಲು ಭಾರತದ ತಂಡದ ನೈತಿಕ ಸ್ಥೈರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಇದು ಅಂತ್ಯವಲ್ಲ. ಭಾರತ ತಂಡ ಮತ್ತೊಮ್ಮೆ ಕಂ ಬ್ಯಾಕ್ ಮಾಡಲಿದೆ” ಎಂದವರು ಹೇಳಿದ್ದಾರೆ.
ತನ್ನ ಸಹೋದರಿಯ ಪುತ್ರ ಪಾಕಿಸ್ತಾನ ತಂಡದ ನಾಯಕನಾದರೂ ತನಗೆ ಹಾಗೂ ಕುಟುಂಬಕ್ಕೆ ದೇಶವೇ ಮೊದಲು ಎಂದು ಮೆಹಬೂಬ್ ಹಸನ್ ಹೇಳಿದ್ದಾರೆ.
ಸರ್ಫ್ರಾಜ್ ಅಹ್ಮದ್ ರ ತಾಯಿ ಭಾರತದಲ್ಲೇ ಹುಟ್ಟಿದ್ದರು. ಅವರನ್ನು ಪಾಕಿಸ್ತಾನದ ಕರಾಚಿಗೆ ಮದುವೆ ಮಾಡಿಕೊಡಲಾಗಿತ್ತು. ಈಗಲೂ ಆಕೆ ತನ್ನ ಸಹೋದರನೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ವಿಡಿಯೋ ಕಾಲ್ ಮೂಲಕ ಮಾತುಕತೆ ನಡೆಸುತ್ತಾರೆ.
Next Story