ಶೀಘ್ರವೇ 200 ರೂ. ಹೊಸ ನೋಟು ಬಿಡುಗಡೆ
ಹೊಸದಿಲ್ಲಿ, ಜೂ.6: 2000 ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು ಚಿಲ್ಲರೆ ಮಾಡಲು ಪರದಾಡುತ್ತಿರುವ ನಾಗರಿಕರಿಗೆ ಸಿಹಿ ಸುದ್ದಿಯೊಂದು ಲಭಿಸಿದೆ. ಶೀಘ್ರವೇ 200 ರೂ. ಮುಖಬೆಲೆಯ ನೋಟುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಆರ್ಬಿಐ ನಿರ್ಧರಿಸಿದೆ.
200 ರೂ. ಕರೆನ್ಸಿ ನೋಟುಗಳನ್ನು ಮುದ್ರಿಸುವಂತೆ ಆರ್ಬಿಐ ಆದೇಶಿಸಿದೆ. 200 ರೂ. ೋಟುಗಳನ್ನು ಚಲಾವಣೆಗೆ ತರಲು ಮಾರ್ಚ್ ತಿಂಗಳಲ್ಲೇ ವಿತ್ತ ಸಚಿವಾಲಯದೊಂದಿಗೆ ಆರ್ಬಿಐ ಮಾತುಕತೆ ನಡೆಸಿತ್ತು ಎಂದು ಉನ್ನತ ಮೂಲಗಳು ತಿಳಿಸಿವೆ.
Next Story