ಅಸ್ಪಷ್ಟ ಸಾಕ್ಷ್ಯ: ಮತ್ತೊಮ್ಮೆ ಕಾವ್ಯಾ ಮಾಧವನ್ ವಿಚಾರಣೆ ನಡೆಸಲಿರುವ ಪೊಲೀಸರು
ಕೊಚ್ಚಿ,ಜು. 26: ನಟಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ನಟಿ ಮತ್ತುದಿಲೀಪ್ರ ಪತ್ನಿ ಕಾವ್ಯಾ ಮಾಧವನ್ರಿಂದ ಪೊಲೀಸರು ಪುನಃ ಸಾಕ್ಷ್ಯ ಸಂಗ್ರಹಿಸಲಿದ್ದಾರೆ ಎಂದು ವರದಿಯಾಗಿದೆ. ದಿಲೀಪ್ರ ಆಲುವದ ಮನೆಯಲ್ಲಿ ಕಾವ್ಯಾರನ್ನು ಕಳೆದ ದಿವಸ ಪೊಲೀಸರು ಆರುಗಂಟೆಕಾಲ ಪ್ರಶ್ನಿಸಿದ್ದರು. ಆದರೆ ಅವರ ಹೇಳಿಕೆಯು ಅಸ್ಪಷ್ಟವಾದ್ದರಿಂದ ಪುನಃ ಅವರನ್ನು ಪ್ರಶ್ನಿಸಲಾಗುವುದು ಎಂದು ತಿಳಿದು ಬಂದಿದೆ. ಪಲ್ಸರ್ ಸುನೀಯ ಕುರಿತು, ಅಕ್ರಮಗಳ ಕುರಿತು ಪ್ರಶ್ನಿಸಿದಾಗ ತನಗೆ ಗೊತ್ತಿಲ್ಲ ಎಂದು ಕಾವ್ಯಾ ಉತ್ತರಿಸಿದ್ದಾರೆ ಎನ್ನಲಾಗಿದೆ. ಮೆಮೊರಿ ಕಾರ್ಡ್, ಫೋನ್ ಕುರಿತ ಮಾಹಿತಿಯನ್ನು ಪೊಲೀಸರು ಕೇಳಿ ತಿಳಿದುಕೊಂಡಿದ್ದಾರೆ.
ಕಾವ್ಯಾರ ಅಮ್ಮ ಶ್ಯಾಮಲಾರಲ್ಲಿ ಕೂಡಾ ಪೊಲೀಸರು ಮಾಹಿತಿ ಕೇಳಿದ್ದಾರೆ. ಕಾವ್ಯಾರ ಆನ್ಲೈನ ಬಟ್ಟೆವ್ಯಾಪಾರದ ಸಂಸ್ಥೆ ಕಾಕ್ಕನಾಟ್ಟ್ ಲಕ್ಷ್ಯದಲ್ಲಿ ಕೆಲವು ದಿವಸಗಳ ವರಮಾನದಲ್ಲಿ ಏರುಪೇರು ಕಂಡು ಬಂದಿದೆ. ಇದರ ಬಗ್ಗೆ ಪೊಲೀಸರು ಕಾವ್ಯಾರನ್ನು ಪ್ರಶ್ನಿಸಿದ್ದಾರೆ.
ಮುಖ್ಯ ಆರೋಪಿ ಪಲ್ಸರ್ ಸುನೀ ನೀಡಿದ ಮಾಹಿತಿಗಳ ಆಧಾರದಲ್ಲಿ ಕಾವ್ಯಾರನ್ನು ಪ್ರಶ್ನಿಸಲು ತೀರ್ಮಾನಿಸಲಾಗಿತ್ತು. ನಟಿಗೆ ಕಿರುಕುಳ ನೀಡಿದ ದೃಶ್ಯಗಳ ಮೆಮೊರಿ ಕಾರ್ಡ್ ಕಾವ್ಯಾರ ಬಟ್ಟೆಯಂಗಡಿಯಲ್ಲಿ ಕೊಟ್ಟಿರುವುದಾಗಿ ಸುನೀ ಹೇಳಿದ್ದಾನೆ. ಇದರ ಆಧಾರದಲ್ಲಿ ಪೊಲೀಸರು ಇಲ್ಲಿ ತಪಾಸಣೆ ನಡೆಸಿದರೂ ಮೆಮೊರಿ ಕಾಡ್ ಪತ್ತೆಯಾಗಿಲ್ಲ.